ಜಂಗಮರೆಂದರೆ ಮೇಲಿನಿಂದ ಉದುರಿದವರಲ್ಲ: ಚಂಪಾ

Update: 2018-03-20 16:24 GMT

ಧಾರವಾಡ, ಮಾ.20: ವೀರಶೈವ ಮಠಾಧೀಶರು ಲಿಂಗಾಯತ ಧರ್ಮದ ಸತ್ಯವನ್ನು ಒಪ್ಪಿಕೊಂಡು ಲಿಂಗಾಯತದೊಳಗೆ ಬರಬೇಕು. ಜಂಗಮರೆಂದರೆ ಮೇಲಿನಿಂದ ಉದುರಿದವರು ಅಲ್ಲ, ನೆಲದಿಂದ ಉದ್ಭವವಾದವರು ಅಲ್ಲ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದರು.

ಕರ್ನಾಟಕ ಕಲಾ ಮಹಾವಿದ್ಯಾಲಯದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ಕೂಡ ಒಬ್ಬ ಜಂಗಮನೇ. ವೀರಶೈವ ಅಂತಾ ಕರೆದುಕೊಳ್ಳೋದು ಲಿಂಗಾಯತದ ಒಂದು ಭಾಗ. ಲಿಂಗಾಯತ ಅನ್ನೋದು ವೀರಶೈವದ ಒಂದು ಪಂಗಡ ಎಂದ ಅವರು, ಎಲ್ಲರೂ ಕಾಯಕ ನಿಷ್ಠೆ ಇಟ್ಟುಕೊಂಡು ಲಿಂಗಾಯತರಾಗಬೇಕು ಎಂದರು.

ಲಿಂಗಾಯತ ಧರ್ಮ ವಿಷಯದಲ್ಲಿ ರಾಜ್ಯ ಸರಕಾರ ಕೈಗೊಂಡ ನಿರ್ಣಯ ಬಹಳ ಖುಷಿ ತಂದಿದ್ದು, ಇದು ಐತಿಹಾಸಿಕವಾದ ಮಹತ್ವದ ನಿರ್ಣಯ. ಲಿಂಗಾಯತ ಬಲಾಢ್ಯವಾದ ಸಮುದಾಯವಾಗಿದ್ದು, ಆರ್ಥಿಕ, ಸಾಂಸ್ಕೃತಿಕ, ರಾಜಕೀಯವಾಗಿ ಬಲಾಢ್ಯವಾದ ಸಮುದಾಯ ಮನುವಾದದ ವಿರುದ್ಧ ಕ್ರಾಂತಿ ಮಾಡಿದ ಧರ್ಮಕ್ಕೆ ನ್ಯಾಯ ಸಿಕ್ಕಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News