ಯಶಸ್ಸಿಗೆ ಸ್ವ-ನಂಬಿಕೆ ಅತ್ಯಂತ ಮುಖ್ಯ: ರೊನಾಲ್ಡೊ

Update: 2018-03-20 18:42 GMT

ಲಿಸ್ಬನ್, ಮಾ.20: ತನ್ನ ಯಶಸ್ಸಿಗೆ ಸ್ವನಂಬಿಕೆಯೇ ಪ್ರಮುಖ ಕಾರಣವಾಗಿತ್ತು. ನೀವೆಲ್ಲರೂ ಸ್ವ-ನಂಬಿಕೆ ಬೆಳೆಸಿಕೊಳ್ಳಬೇಕು ಎಂದು ಪೋರ್ಚುಗೀಸ್‌ನ ಸಹ ಆಟಗಾರರಿಗೆ ಕ್ರಿಸ್ಟಿಯಾನೊ ರೊನಾಲ್ಡೊ ಸಲಹೆ ನೀಡಿದ್ದಾರೆ.

ಲಿಸ್ಬನ್‌ನಲ್ಲಿ ಪೋರ್ಚುಗಿಸ್ ವರ್ಷದ ಆಟಗಾರ ಪ್ರಶಸ್ತಿ ಸ್ವೀಕರಿಸಿದ ಬಳಿಕ ರೊನಾಲ್ಡೊ ಮಾತನಾಡಿದರು.

 ‘‘ನಾವೇ ಶ್ರೇಷ್ಠ ಎಂದು ಯಾವಾಗಲೂ ನಂಬಿಕೆ ಇಟ್ಟುಕೊಂಡಿರಬೇಕು. ಫುಟ್ಬಾಲ್ ಮೈದಾನದಲ್ಲಿ ನಮಗಿಂತ ಯಾರೂ ಉತ್ತಮರಿಲ್ಲ. ನಾವು ದೊಡ್ಡದನ್ನು ಯೋಚಿಸಬೇಕು. ವೈಯಕ್ತಿಕವಾಗಿ ನನಗಿದು ಯಶಸ್ವಿ ವರ್ಷ. ನಾನು ಐದು ಪ್ರಶಸ್ತಿಗಳನ್ನು(ಚಾಂಪಿಯನ್ಸ್ ಲೀಗ್,ಯುಇಎಫ್‌ಎ ಸೂಪರ್‌ಕಪ್, ವರ್ಲ್ಡ್ ಕ್ಲಬ್ ಕಪ್, ಸ್ಪಾನೀಶ್ ಲೀಗ್ ಪ್ರಶಸ್ತಿ ಹಾಗೂ ಸ್ಪಾನೀಶ್ ಸೂಪರ್‌ಕಪ್), ಬ್ಯಾಲನ್ ಡಿ’ಒರ್ ಹಾಗೂ ಫಿಫಾ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಜಯಿಸಿದ್ದೇನೆ’’ ಎಂದರು.

ರೊನಾಲ್ಡೊ ಐದು ಬಾರಿ ಬ್ಯಾಲನ್ ಡಿ’ಒರ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಇದೀಗ ಪೋರ್ಚುಗಲ್ ತಂಡದೊಂದಿಗೆ ಲಿಸ್ಬನ್‌ನಲ್ಲಿರುವ ರೊನಾಲ್ಡೊ ಶುಕ್ರವಾರ ಈಜಿಪ್ಟ್ ವಿರುದ್ಧ ವರ್ಲ್ಡ್‌ಕಪ್ ಕ್ವಾಲಿಫೈಯರ್ ಪಂದ್ಯ ಆಡಲಿದ್ದಾರೆ. 33ರ ಹರೆಯದ ರೊನಾಲ್ಡೊ ಪೋರ್ಚುಗಲ್ ಪರ ಆಡಿರುವ 147 ಪಂದ್ಯಗಳಲ್ಲಿ 79 ಗೋಲುಗಳನ್ನು ಬಾರಿಸಿದ್ದಾರೆ. 2018ರ ವಿಶ್ವಕಪ್‌ನಲ್ಲಿ ಹಾಲಿ ಯುರೋಪಿಯನ್ ಚಾಂಪಿಯನ್ ಪೋರ್ಚುಗಲ್‌ನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News