ಕ್ಯಾಲ್ಸಿಯಂ ಕೊರತೆಯನ್ನು ಸೂಚಿಸುವ ಈ ಲಕ್ಷಣಗಳು ನಿಮಗೆ ತಿಳಿದಿರಲಿ

Update: 2018-03-21 13:43 GMT

ಕ್ಯಾಲ್ಸಿಯಂ ರಕ್ತದಲ್ಲಿ ಹರಿಯುವುದರೊಂದಿಗೆ ಮೂಳೆಗಳಲ್ಲಿ ಸಂಗ್ರಹಗೊಳ್ಳುವ ಮೂಲಕ ಕಾರ್ಯವನ್ನು ನಿರ್ವಹಿಸುತ್ತದೆ. ರಕ್ತದಲ್ಲಿ ಕ್ಯಾಲ್ಸಿಯಂ ಸ್ವಯಂ ನಿಯಂತ್ರಿತವಾಗಿದೆ, ಆದರೆ ರಕ್ತದಲ್ಲಿ ಕ್ಯಾಲ್ಸಿಯಂ ಕೊರತೆಯುಂಟಾದರೆ ಮೂಳೆಗಳು ಈ ಖನಿಜವನ್ನು ಬಿಡುಗಡೆಗೊಳಿಸುತ್ತವೆ.ಇದು ಅಸ್ಥಿರಂಧ್ರತೆ ಮತ್ತು ಹಲ್ಲುಗಳ ಅನಾರೋಗ್ಯಕ್ಕೆ ಕಾರಣವಾಗಬಹುದು.

19ರಿಂದ 50ವರ್ಷ ವಯೋಮಾನದವರು ಪ್ರತಿನಿತ್ಯ 1000 ಮಿ.ಗ್ರಾಂ ಕ್ಯಾಲ್ಸಿಯಂಅನ್ನು ಸೇವಿಸಬೇಕು ಎಂದು ರಾಷ್ಟ್ರೀಯ ಆರೋಗ್ಯಸಂಸ್ಥೆಯು ಶಿಫಾರಸು ಮಾಡಿದೆ.

ಕ್ಯಾಲ್ಸಿಯಂ ಕೊರತೆಯು ಸಾಮಾನ್ಯ ಸಮಸ್ಯೆಯಾಗಿದ್ದು, ಸಕಾಲದಲ್ಲಿ ಅದನ್ನು ಪತ್ತೆ ಹಚ್ಚಿಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದರೆ ಗಂಭೀರ ಸಮಸ್ಯೆಗೆ ಕಾರಣವಾಗಬಹುದು.ಶರೀರದಲ್ಲಿ ಕ್ಯಾಲ್ಸಿಯಂಕೊರತೆಯನ್ನು ಸೂಚಿಸುವ ಕೆಲವು ಲಕ್ಷಣಗಳ ಮಾಹಿತಿ ಇಲ್ಲಿದೆ.....

►ಮೂಳೆಮುರಿತ

ಆಕಸ್ಮಿಕವಾಗಿ ಕೆಳಕ್ಕೆ ಬಿದ್ದ ಮಾತ್ರಕ್ಕೇ ನಿಮ್ಮ ಶರೀರದಮೂಳೆ ಮುರಿದರೆ ಅದು ನೀವು ಕಡಿಮೆ ಸೋಡಿಯಂ ಇರುವ ಆಹಾರವನ್ನು ಸೇವಿಸುತ್ತಿದ್ದೀರಿ ಎನ್ನುವುದನ್ನು ಸೂಚಿಸುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಸೇವಿಸದಿದ್ದರೆ ಮೂಳೆಗಳು ಗಡುಸಾಗುತ್ತವೆ. 30ರ ಪ್ರಾಯದ ನಂತರ ನಿಮ್ಮ ಮೂಳೆಗಳು ನಿಧಾನವಾಗಿ ಕ್ಯಾಲ್ಸಿಯಂಅನ್ನು ಕಳೆದುಕೊಳ್ಳಲು ಆರಂಭಿಸುತ್ತವೆ. ಈ ಕ್ಯಾಲ್ಸಿಯಂ ನಷ್ಟವನ್ನು ಮರುಪೂರಣ ಮಾಡಲು ಸಾಧ್ಯವಿಲ್ಲ.ಋತುಚಕ್ರ ನಿಂತ ಮಹಿಳೆಯರಲ್ಲಿ ಮೂಳೆಮುರಿತ ಸಾಮಾನ್ಯವಾಗಿದೆ.

►ಸ್ನಾಯುಸೆಳೆತ

ಸಣ್ಣಗೆ ಸ್ನಾಯುಸೆಳೆತ ಕಾಣಿಸಿಕೊಂಡರೆ ತಲೆ ಬಿಸಿ ಮಾಡಿಕೊಳ್ಳಬೇಕಿಲ್ಲ.ಆದರೆ ಅದು ಸುದೀರ್ಘ ಕಾಲ ಉಳಿದುಕೊಂಡರೆ ಶರೀರದಲ್ಲಿ ತೀವ್ರಕ್ಯಾಲ್ಸಿಯಂ ಕೊರತೆಯುಂಟಾಗಿರುವ ಸಾಧ್ಯತೆ ಇರುವುದರಿಂದ ನೀವು ತಕ್ಷಣವೇ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ.

►ಅಧಿಕ ರಕ್ತದೊತ್ತಡ

ಪ್ರತಿದಿನ ಶಿಫಾರಸು ಮಾಡಲ್ಪಟ್ಟ ಪ್ರಮಾಣದಲ್ಲಿ ಕ್ಯಾಲ್ಸಿಯಂ ಸೇವಿಸುವುದರಿಂದ ಅಧಿಕ ರಕ್ತದೊತ್ತಡದ ಅಪಾಯವನ್ನು ತಗ್ಗಿಸಬಹುದಾಗಿದೆ. ಡೇರಿ ಉತ್ಪನ್ನಗಳು, ಬಾದಾಮಿ,ಮತ್ತು ಬ್ರೋಕೊಲಿ ಹಾಗೂ ಕ್ಯಾಬೇಜ್‌ಗಳಂತಹ ತರಕಾರಿಗಳು ಸೇರಿದಂತೆ ಕ್ಯಾಲ್ಸಿಯಂ ಅಧಿಕವಾಗಿರುವ ಆಹಾರಗಳನ್ನು ಸೇವಿಸಿ.

►ಹೆಚ್ಚಿನ ದೇಹತೂಕ

ದೇಹದತೂಕ ಹೆಚ್ಚಾಗಿರುವುದು ಕ್ಯಾಲ್ಸಿಯಂ ಕೊರತೆಯನ್ನು ಸೂಚಿಸುತ್ತದೆ.ಅಧಿಕ ಕ್ಯಾಲ್ಸಿಯಂ ಇರುವ ಆಹಾರಗಳು ಮತ್ತು ಕಡಿಮೆಕೊಬ್ಬನ್ನೊಳಗೊಂಡಿರುವ ಡೇರಿ ಉತ್ಪನ್ನಗಳ ಸೇವನೆಯು ಶರೀರದ ಹೆಚ್ಚುವರಿ ತೂಕವನ್ನು ಇಳಿಸಲು ನೆರವಾಗುತ್ತದೆ.

►ಡೈರಿ ಉತ್ಪನ್ನಗಳ ಬಗ್ಗೆ ಅಸಹನೆ

ಡೇರಿ ಉತ್ಪನ್ನಗಳ ಬಗ್ಗೆ ನಿಮಗೆ ಅಸಹನೆಯಿದ್ದರೆ, ಅವುಗಳಸೇವನೆಯ ಬಳಿಕ ಅಸ್ವಸ್ಥತೆಯ ಅನುಭವವಾದರೆ ಅದಕ್ಕೆ ಕ್ಯಾಲ್ಸಿಯಂ ಕೊರತೆ ಕಾರಣವಾಗಿರಬಹುದು. ಯೋಗರ್ಟ್, ಹಾಲು ಮತ್ತು ಚೀಸ್‌ನಂತಹ ಕಡಿಮೆಕೊಬ್ಬು ಇರುವ ಡೇರಿ ಉತ್ಪನ್ನಗಳು ಕ್ಯಾಲ್ಸಿಯಂನ ಸಮೃದ್ಧಮೂಲಗಳಾಗಿವೆ.

►ದಂತಕುಳಿಗಳು

ಬಾಯಿಯ ಆರೋಗ್ಯವನನ್ನು ನಿರ್ಲಕ್ಷಿಸುವುದು ದಂತಕುಳಿಗಳಿಗೆ ಕಾರಣವಾಗುತ್ತದೆ. ಆದರೆ ಶರೀರದಲ್ಲಿ ಕ್ಯಾಲ್ಸಿಯಂ ಕೊರತೆಯೂ ಇದಕ್ಕೆ ತನ್ನ ಕೊಡುಗೆಯನ್ನು ನೀಡುತ್ತದೆ. ಯುವತಿಯರು ಮತ್ತು ಗರ್ಭಿಣಿಯರಲ್ಲಿ ದಂತಕುಳಿಗಳು ಹೆಚ್ಚಾಗಿ ಕಂಡುಬರುತ್ತವೆ.

►ದುರ್ಬಲ ಮತ್ತು ಗಡುಸಾದ ಉಗುರುಗಳು

ದುರ್ಬಲ ಮತ್ತು ಗಡುಸಾದ ಉಗುರುಗಳು ಕ್ಯಾಲ್ಸಿಯಂ ಕೊರತೆಯನ್ನು ಸೂಚಿಸುವ ಅತ್ಯಂತ ಸಾಮಾನ್ಯ ಲಕ್ಷಣಗಳಾಗಿವೆ.ನಿಮ್ಮ ಉಗುರುಗಳು ಆಗಾಗ್ಗೆ ಚೂರುಚೂರಾಗಿ ತುಂಡಾಗುತ್ತಿದ್ದರೆ ಅದು ಕ್ಯಾಲ್ಸಿಯಂ ಕೊರತೆಯನ್ನು ಸೂಚಿಸುತ್ತದೆ.

ನೀವು ಅದೇ ಹಸಿರುಎಲೆಗಳ ತರಕಾರಿಗಳನ್ನು ತಿನ್ನುತ್ತಿದ್ದರೆ ಅದನ್ನು ಬಿಟ್ಟು ಕಡುಹಸಿರು ಎಲೆಗಳ ತರಕಾರಿಗಳನ್ನು ತಿನ್ನಲು ಆರಂಭಿಸಿ. ಈ ತರಕಾರಿಗಳು ಅಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂಅನ್ನು ಒಳಗೊಂಡಿರುತ್ತವೆ.

ನೀವು ಬೆಳಗಿನ ತಿಂಡಿಯ ಮೊದಲು ಕ್ಯಾಲ್ಸಿಯಂಮಾತ್ರೆಗಳನ್ನು ಸೇವಿಸುತ್ತಿದ್ದರೆ ಆ ಅಭ್ಯಾಸವನ್ನು ಕೈಬಿಡಿ. ಖಾಲಿ ಹೊಟ್ಟೆಯಲ್ಲಿ ಕ್ಯಾಲ್ಸಿಯಂ ಮಾತ್ರೆಗಳ ಸೇವನೆ ಪರಿಣಾಮವನ್ನು ನೀಡಬಹುದಾದರೂ ಏನಾದರೂ ತಿಂದ ಬಳಿಕ ಆ ಮಾತ್ರೆಗಳನ್ನು ಸೇವಿಸಿದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ.ಅದು ಶರೀರವು ಕ್ಯಾಲ್ಸಿಯಂ ಹೀರಿಕೊಳ್ಳುವುದನ್ನು ಹೆಚ್ಚಿಸುತ್ತದೆ. ಕ್ಯಾಲ್ಸಿಯಂ ವಿಟಾಮಿನ್ ಡಿ ಜೊತೆಗೂಡಿ ಕಾರ್ಯ ನಿರ್ವಹಿಸುವುದರಿಂದ ಪೂರಕವಾಗಿ ವಿಟಾಮಿನ್ ಡಿ ಒಳಗೊಂಡಿರುವ ಆಹಾರಗಳನ್ನು ಹೆಚ್ಚಾಗಿಸೇವಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News