ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಇಬ್ಬರು ನಾಯಕರು ಮಾತ್ರ ಭಾಗಿ

Update: 2018-03-21 19:02 GMT

ಹೊಸದಿಲ್ಲಿ, ಮಾ.21: ಹನ್ನೊಂದನೇ ಆವೃತ್ತಿಯ ಐಪಿಎಲ್‌ನ ಉದ್ಘಾಟನಾ ಸಮಾರಂಭ ಎ.7 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ನಾಯಕರು ಮಾತ್ರ ಭಾಗವಹಿಸಲಿದ್ದು, ಉಳಿದ ಆರು ಐಪಿಎಲ್ ಫ್ರಾಂಚೈಸಿ ನಾಯಕರು ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.

ಎಲ್ಲ 8 ನಾಯಕರು ಎಪ್ರಿಲ್ 6 ರಂದು ವಿಶೇಷ ವೀಡಿಯೊ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದು, ಅದೇ ದಿನ ಸಂಜೆ ತಾವು ಆಡಲಿರುವ ನಗರಗಳಿಗೆ ತೆರಳಲಿದ್ದಾರೆ.

ಕಳೆದ ವರ್ಷದ ತನಕ ಐಪಿಎಲ್ ಉದ್ಘಾಟನಾ ಸಮಾರಂಭ ಮೊದಲ ಪಂದ್ಯಕ್ಕಿಂತ ಒಂದು ದಿನ ಮೊದಲು ನಡೆಯುತ್ತಿತ್ತು. ಹಾಗಾಗಿ ಎಲ್ಲ ನಾಯಕರು ಸಮಾರಂಭದಲ್ಲಿ ಭಾಗವಹಿಸಿ ‘ಸ್ಪೀರಿಟ್ ಆಫ್ ಕ್ರಿಕೆಟ್’ ಮನವಿಗೆ ಸಹಿ ಹಾಕುತ್ತಿದ್ದರು. ಮುಂಬೈ ಹಾಗೂ ಚೆನ್ನೈ ನಡುವೆ ನಡೆಯಲಿರುವ ಐಪಿಎಲ್‌ನ ಮೊದಲ ಪಂದ್ಯಕ್ಕಿಂತ ಮೊದಲು ಎ.7 ರಂದು ಮುಂಬೈನಲ್ಲಿ ಉದ್ಘಾಟನಾ ಸಮಾರಂಭ ನಡೆಸಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ.

 ಎ.8 ರಂದು ಐಪಿಎಲ್ ಪಂದ್ಯಗಳನ್ನು ಆಡಲಿರುವ ಇತರ ನಾಲ್ಕು ಫ್ರಾಂಚೈಸಿಗಳಿಗೆ ಐಪಿಎಲ್‌ನ ಹಿರಿಯ ಅಧಿಕಾರಿಗಳು ವಸತಿ ವ್ಯವಸ್ಥೆ ಕಲ್ಪಿಸದೆ ಸಮಸ್ಯೆ ಸೃಷ್ಟಿಸಿದ್ದಾರೆ. ಎ.8ರಂದು ಸಂಜೆ 4 ಗಂಟೆಗೆ ಮೊಹಾಲಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾತ್ರಿ 8ಕ್ಕೆ ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ಪಂದ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News