ಕೇಂಬ್ರಿಜ್ ಅನಾಲಿಟಿಕಾದೊಂದಿಗೆ ಬಿಜೆಪಿ, ಕಾಂಗ್ರೆಸ್‌ಗೆ ಸಂಬಂಧ: ದೃಢಪಡಿಸಿದ ದಾಖಲೆ

Update: 2018-03-22 15:07 GMT

ಹೊಸದಿಲ್ಲಿ, ಮಾ. 22: ಕಾಂಗ್ರೆಸ್ ಹಾಗೂ ಬಿಜೆಪಿ ಲಂಡನ್ ಮೂಲದ ದತ್ತಾಂಶ ವಿಶ್ಲೇಷಣೆ ಸಂಸ್ಥೆ ಕೇಂಬ್ರಿಜ್ ಅನಾಲಿಟಿಕಾದ ಭಾರತೀಯ ಘಟಕದ ಗ್ರಾಹಕರು ಆಗಿರಬಹುದು ಎಂದು ಎನ್‌ಡಿಟಿವಿಗೆ ಲಭ್ಯವಾದ ಇಲೆಕ್ಟ್ರಾನಿಕ್ಸ್ ದಾಖಲೆ ಹಾಗೂ ಇತರ ದಾಖಲೆಗಳು ಬಹಿರಂಗಪಡಿಸಿವೆ.

ಒವ್ಲೆನೊವನ್ನು ಜನತಾದಳ (ಸಂಯುಕ್ತ)ದ ನಾಯಕ ಕೆ.ಸಿ. ತ್ಯಾಗಿಯ ಪುತ್ರ ಅಮರಿಶ್ ತ್ಯಾಗಿ ನಡೆಸುತ್ತಿದ್ದಾರೆ. ಎಸ್‌ಸಿಐ ಇಂಡಿಯಾ ಹಾಗೂ ಎಸ್‌ಸಿಎಲ್ ಗ್ರೂಪ್ ಲಂಡನ್ ಜಂಟಿ ಉದ್ಯಮ ಒಂದು ಭಾಗ ತಾನು ಎಂದು ಒವ್ಲೆನೊ ಹೇಳಿಕೊಂಡಿದೆ. ಎಸ್‌ಸಿಎಲ್ ಗುಂಪು ಕೇಂಬ್ರಿಜ್ ಅನಾಲಿಟಿಕಾದ ಮಾತೃ ಸಂಸ್ಥೆ. ಈಗ ಒವ್ಲೆನೊ ವೆಬ್‌ಸೈಟ್ ಅನ್ನು ಸ್ಥಗಿತಗೊಳಿಸಲಾಗಿದೆ.

 ಎನ್‌ಡಿಟಿವಿಯ ಸಂದರ್ಶನದಲ್ಲಿ ತ್ಯಾಗಿ, 2012ರ ಉತ್ತರಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಹಾಗೂ 2010 ಹಾಗೂ 2011ರ ನಡುವೆ ಜಾರ್ಖಂಡ್‌ನಲ್ಲಿ ಯೂತ್ ಕಾಂಗ್ರೆಸ್ ಪರವಾಗಿ ಕಂಪೆನಿ ಕಾರ್ಯ ನಿರ್ವಹಿಸಿದೆ ಎಂದು ಹೇಳಿದ್ದಾರೆ.

 2010ರ ಬಿಹಾರ್ ಚುನಾವಣೆ ಸಂದರ್ಭ ಭಾರತದ ರಾಜಕೀಯ ಪಕ್ಷಕ್ಕೆ ಕಂಪೆನಿ ಸೇವೆ ನೀಡಿದೆ ಎಂದು ಕೇಂಬ್ರಿಜ್ ಅನಾಲಿಟಿಕಾದ ವೆಬ್‌ಸೈಟ್ ಹೇಳಿದೆ. ‘‘ನಮ್ಮ ಗ್ರಾಹಕರು ದಾಖಲಾರ್ಹ ಜಯ ಗಳಿಸಿದ್ದಾರೆ. ಕೇಂಬ್ರಿಜ್ ಅನಾಲಿಟಿಕಾ ಗುರಿ ಇರಿಸಿದ್ದ ಒಟ್ಟು ಸ್ಥಾನಗಳಲ್ಲಿ ಶೇ. 90 ಸ್ಥಾನಗಳಲ್ಲಿ ಜಯ ದೊರಕಿದೆ’’ ಎಂದು ವೆಬ್‌ಸೈಟ್ ಹೇಳಿದೆ.

 ಒವ್ಲೆನೊ ನಿರ್ದೇಶಕರಲ್ಲಿ ಒಬ್ಬರಾಗಿರುವ ಹಿಮಾಂಶು ಶರ್ಮಾ ಅವರ ಸಾರ್ವಜನಿಕ ಲಭ್ಯವಾಗುವ ಸಾಮಾಜಿಕ ಜಾಲ ತಾಣವಾದ ಲಿಂಕ್‌ಡ್‌ಇನ್ ಪೇಜ್‌ನ ಸ್ಟೇಟಸ್, ‘‘ಆಡಳಿತರೂಡ ಬಿಜೆಪಿ ಪಕ್ಷಕ್ಕಾಗಿ ನಾಲ್ಕು ಚುನಾವಣಾ ಅಭಿಯಾನ ಯಶಸ್ವಿಗೊಳಿಸಲಾಗಿದೆ’’ ಹಾಗೂ ‘‘ಮಿಷನ್ 272 ಗುರಿ ಸಾಧಿಸಲಾಗಿದೆ’’ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News