ಮಿಯಾಮಿ ಓಪನ್: ಮೊದಲ ಸುತ್ತಿನಲ್ಲೇ ಸೋತ ಸೆರೆನಾ

Update: 2018-03-22 18:26 GMT

ಫ್ಲೋರಿಡಾ, ಮಾ.22: ಮಿಯಾಮಿ ಮಾಸ್ಟರ್ಸ್ ಟೆನಿಸ್ ಓಪನ್‌ನಲ್ಲಿ ಅಮೆರಿಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಲಿಯಮ್ಸ್ ಜಪಾನ್‌ನ ನಯೊಮಿ ಒಸಾಕಾ ವಿರುದ್ಧ 3-6, 2-6 ನೇರ ಸೆಟ್‌ಗಳಿಂದ ಸೋತಿದ್ದಾರೆ. ವಿಲಿಯಮ್ಸ್ ಈವರೆಗೆ ಕೇವಲ 4 ಬಾರಿ ಮಾತ್ರ ಮೊದಲ ಸುತ್ತಿನಲ್ಲಿ ಸೋತಿದ್ದಾರೆ. 2012ರ ಫ್ರೆಂಚ್ ಓಪನ್‌ನಲ್ಲಿ ಕೊನೆಯ ಬಾರಿ ಈ ಕಳಪೆ ಸಾಧನೆ ಮಾಡಿದ್ದರು. 20ರ ಹರೆಯದ ಒಸಾಕಾ ರವಿವಾರ ಮೊದಲ ಬಾರಿ ಇಂಡಿಯನ್ ವೆಲ್ಸ್ ಪ್ರಶಸ್ತಿ ಜಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 22ನೇ ಸ್ಥಾನ ತಲುಪಿದ್ದಾರೆ. ಸುಮಾರು ಒಂದು ವರ್ಷದ ಬಳಿಕ ಟೆನಿಸ್ ಅಂಗಣಕ್ಕೆ ವಾಪಸಾಗಿರುವ ವಿಲಿಯಮ್ಸ್ 491ನೇ ರ್ಯಾಂಕಿನಲ್ಲಿದ್ದಾರೆ. ಮಾಜಿ ನಂ.1 ಹಾಗೂ ಮೂರು ಬಾರಿಯ ಚಾಂಪಿಯನ್ ವಿಕ್ಟೋರಿಯಾ ಅಝೆರೆಂಕಾ ಅವರು ಕ್ಯಾಥರಿನ್ ಬೆಲ್ಲಿಸ್ ವಿರುದ್ಧ 6-3, 6-0 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News