ಉತ್ತರ ಪ್ರದೇಶ: ಬಿಎಸ್ ಪಿ ಶಾಸಕನಿಂದ ಬಿಜೆಪಿ ಅಭ್ಯರ್ಥಿಗೆ ಅಡ್ಡ ಮತದಾನ

Update: 2018-03-23 07:12 GMT

ಲಕ್ನೋ, ಮಾ.23: ಬಿಜೆಪಿ ಅಭ್ಯರ್ಥಿಗೆ ಬಿಎಸ್ ಪಿಯ ಶಾಸಕರೊಬ್ಬರು ಮತ ನೀಡಿರುವ ಹಿನ್ನೆಲೆಯಲ್ಲಿ ಉತ್ತರ  ಪ್ರದೇಶ ರಾಜ್ಯಸಭೆಯ ಒಂದು ಸೀಟು ದಕ್ಕಿಸಿಕೊಳ್ಳಲು ಮಾಯಾವತಿಯವರ ಹೋರಾಟ ಮತ್ತಷ್ಟು ಕಠಿಣವಾಗಿದೆ. ಬಿಎಸ್ ಪಿ ಶಾಸಕ ಅನಿಲ್ ಸಿಂಗ್ ಬಿಜೆಪಿಗೆ ಅಡ್ಡ ಮತದಾನ ಮಾಡಿದ್ದಾರೆ.

58 ರಾಜ್ಯಸಭಾ ಸೀಟುಗಳಲ್ಲಿ 33ರಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 25 ಸೀಟುಗಳಿಗೆ 6 ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ.

ಉತ್ತರ ಪ್ರದೇಶದಲ್ಲಿ ಬಿಎಸ್ ಪಿ ಶಾಸಕರೊಬ್ಬರು ಮಾತ್ರವಲ್ಲದೆ ಪಕ್ಷೇತರ ಶಾಸಕ ಅಮನ್ಮಣಿ ತ್ರಿಪಾಠಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News