20 ಬಾಲ್ ಗಳಲ್ಲಿ 102 ರನ್ ಬಾರಿಸಿದ ವೃದ್ಧಿಮಾನ್ ಸಹಾ!

Update: 2018-03-24 10:48 GMT

ಹೊಸದಿಲ್ಲಿ, ಮಾ.24: ಐಪಿಎಲ್ ಟೂರ್ನಿ ಆರಂಭವಾಗಲು ಕೆಲ ದಿನಗಳಿರುವಂತೆಯೇ ಈ ಬಾರಿ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ವೃದ್ಧಿಮಾನ್ ಸಹಾ 20 ಬಾಲ್ ಗಳಲ್ಲಿ 102 ರನ್ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.

ಕಾಲಿಘಾಟ್ ನಲ್ಲಿ ನಡೆದ ಜೆಸಿ ಮುಖರ್ಜಿ ಟ್ರೋಫಿಯಲ್ಲಿ ಬಿಎನ್ ಆರ್ ರಿಕ್ರಿಯೇಷನ್ ಕ್ಲಬ್ ವಿರುದ್ಧ ಸಹಾ ಈ ಸಾಧನೆ ಮಾಡಿದ್ದಾರೆ. ಮೋಹುನ್ ಬಾಗನ್ ತಂಡದ ಪರವಾಗಿ ಸಹಾ ಆಡಿದ್ದರು. ನಾಯಕ ಶುಭೋಮೋಯ್ ದಾಸ್ ಜೊತೆ ಆರಂಭಿಕನಾಗಿ ಕ್ರೀಸಿಗಿಳಿದ ಸಹಾ 20 ಎಸೆತಗಳಲ್ಲಿ 102 ರನ್ ಗಳನ್ನು ಸಿಡಿಸಿದ್ದಾರೆ. ಇದರಲ್ಲಿ 14 ಸಿಕ್ಸರ್ ಗಳು ಹಾಗು 4 ಬೌಂಡರಿಗಳು ಸೇರಿತ್ತು. 151 ರನ್ ಗಳನ್ನು ಬೆನ್ನತ್ತಿದ ಮೋಹುನ್ ಬಾಗನ್ ತಂಡ 7 ಓವರ್ ಗಳಲ್ಲಿ ಗೆಲುವಿನ ನಗೆ ಬೀರಿತು.

ಈ ಬಾರಿಯ ಐಪಿಎಲ್ ನಲ್ಲಿ 5 ಕೋಟಿ ರೂ.ಗಳಿಗೆ ಸಹಾ ಸನ್ ರೈಸರ್ಸ್ ಹೈದರಾಬಾದ್ ಪಾಲಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News