ನಾಲ್ಕನೇ ಟೆಸ್ಟ್‌ಗೆ ವಾರ್ನರ್ ನಿಷೇಧ?

Update: 2018-03-26 13:37 GMT

ಮೆಲ್ಬೋರ್ನ್, ಮಾ.26: ಆಸ್ಟ್ರೇಲಿಯ ಕ್ರಿಕೆಟ್ ತಂಡದ ಉಪ ನಾಯಕ ಡೇವಿಡ್ ವಾರ್ನರ್ ದಕ್ಷಿಣ ಆಫ್ರಿಕ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಿಂದ ನಿಷೇಧಕ್ಕೊಳಗಾಗುವ ಸಾಧ್ಯತೆಯಿದೆ.

 ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾನ ಹರಾಜು ಹಾಕಿರುವ ಚೆಂಡು ವಿರೂಪ ಪ್ರಕರಣದಲ್ಲಿ ವಾರ್ನರ್ ಪಾತ್ರವಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯ ವಾರ್ನರ್‌ಗೆ ಬ್ಯಾನ್ ವಿಧಿಸಲು ಸಜ್ಜಾಗಿದೆ ಎಂದು ‘ಡೈಲಿ ಟೆಲಿಗ್ರಾಫ್’ ವರದಿ ಮಾಡಿದೆ. ಕೇಪ್‌ಟೌನ್ ಟೆಸ್ಟ್‌ನಲ್ಲಿ ಚೆಂಡು ವಿರೂಪಗೊಳಿಸುವ ಸಂಚು ನಡೆಸಿರುವುದಾಗಿ ಸ್ಮಿತ್ ತಪ್ಪೊಪ್ಪಿಕೊಂಡ ಬಳಿಕ ನಾಯಕತ್ವವನ್ನು ತ್ಯಜಿಸಿದ್ದರು. ರವಿವಾರ ಐಸಿಸಿ ಸ್ಮಿತ್‌ಗೆ ಪಂದ್ಯ ಶುಲ್ಕದಲ್ಲಿ ಶೇ.100 ದಂಡದ ಜೊತೆಗೆ ಒಂದು ಪಂದ್ಯದಿಂದ ನಿಷೇಧಿಸಿತ್ತು.

ಆಸ್ಟ್ರೇಲಿಯ ತಂಡ ಶುಕ್ರವಾರ ನಡೆಯಲಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಹೊಸ ಮುಖವನ್ನು ಕಣಕ್ಕಿಳಿಸಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News