ಭಿನ್ನರ ವಿರುದ್ಧ ಕಠಿಣ ಕ್ರಮ: ಬಹರೈನ್ ಎಚ್ಚರಿಕೆ

Update: 2018-03-26 17:56 GMT

ದುಬೈ, ಮಾ. 26: ಸಾಮಾಜಿಕ ಮಾಧ್ಯಮವನ್ನು ಬಳಸುವ ಭಿನ್ನಮತೀಯರನ್ನು ಪತ್ತೆಹಚ್ಚಲು ‘ಕಠಿಣ ಕ್ರಮಗಳನ್ನು’ ತೆಗೆದುಕೊಳ್ಳುವುದಾಗಿ ಬಹರೈನ್ ಅಧಿಕಾರಿಗಳು ರವಿವಾರ ಎಚ್ಚರಿಕೆ ನೀಡಿದ್ದಾರೆ.

ಪುಟ್ಟ ದೇಶದಲ್ಲಿ ಮಾನವಹಕ್ಕುಗಳ ಹೋರಾಟಗಾರರು ಸಾಮಾಜಿಕ ಜಾಲತಾಣ ‘ಟ್ವಿಟರ್’ನ್ನು ಸಾಮಾನ್ಯವಾಗಿ ಬಳಸುತ್ತಿದ್ದಾರೆ.

‘‘ವಿಚ್ಛಿದ್ರಕಾರಿ ಸಾಮಾಜಿಕ ಮಾಧ್ಯಮ ಖಾತೆಗಳಿಂದಾಗಿ ಉಂಟಾಗಿರುವ ಅಭೂತಪೂರ್ವ ಮಟ್ಟದ ಗೊಂದಲವನ್ನು ನಿಭಾಯಿಸಲು ಕಠಿಣ ಕ್ರಮಗಳನ್ನು ಸರಕಾರ ತೆಗೆದುಕೊಳ್ಳುತ್ತಿದೆ’’ ಎಂದು ಆಂತರಿಕ ಸಚಿವ ಶೇಖ್ ರಶೀದ್ ಬಿನ್ ಅಬ್ದುಲ್ಲಾ ಅಲ್-ಖಲೀಫ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News