ಡೇವಿಸ್ ಕಪ್ ಕ್ವಾ.ಫೈನಲ್‌ಗೆ ನಡಾಲ್ ವಾಪಸ್

Update: 2018-03-27 18:50 GMT

ಮ್ಯಾಡ್ರಿಡ್, ಮಾ.27: ಮುಂದಿನ ತಿಂಗಳು ವೆಲೆನ್ಸಿಯಾದಲ್ಲಿ ನಡೆಯಲಿರುವ ಜರ್ಮನಿ ವಿರುದ್ಧದ ಡೇವಿಸ್‌ಕಪ್ ವರ್ಲ್ಡ್ ಗ್ರೂಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡಕ್ಕೆ ವಿಶ್ವದ ನಂ.2ನೇ ಆಟಗಾರ ರಫೆಲ್ ನಡಾಲ್ ನೇಮಕಗೊಂಡಿದ್ದಾರೆ.

2016ರಲ್ಲಿ ಭಾರತದಲ್ಲಿ ಐದು ಬಾರಿಯ ಚಾಂಪಿಯನ್ ಸ್ಪೇನ್ ತಂಡ ವಿಶ್ವ ಟೆನಿಸ್‌ಗೆ ವಾಪಸಾಗಲು ನೆರವಾದ ಬಳಿಕ ನಡಾಲ್ ಡೇವಿಸ್‌ಕಪ್‌ನಲ್ಲಿ ಆಡಿಲ್ಲ.

ಸೆರ್ಬಿ ಬ್ರುಗುರಾ ನಾಯಕತ್ವದ ಸ್ಪೇನ್ ತಂಡದಲ್ಲಿ ನಡಾಲ್‌ರಲ್ಲದೆ, ಪಾಬ್ಲೊ ಕರ್ರೆನೊ, ರಾಬರ್ಟೊ ಬೌಟಿಸ್ಟಾ ಅಗುಟ್, ಡೇವಿಡ್ ಫೆರರ್ ಹಾಗೂ ಫೆಲಿಸಿಯಾನೊ ಲೊಪೆಝ್ ಅವರಿದ್ದಾರೆ. 16 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಅಂತಿಮ-8ರ ಘಟ್ಟ ತಲುಪಿದ ಬಳಿಕ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದರು.

ಸತತ ಐದನೇ ಟೂರ್ನಮೆಂಟ್‌ನಿಂದ ವಂಚಿತರಾಗಿರುವ ನಡಾಲ್ ಫೆಬ್ರವರಿ ಅಂತ್ಯಕ್ಕೆ ಮೆಕ್ಸಿಕೊ ಓಪನ್‌ನಲ್ಲಿ ಟೆನಿಸ್‌ಗೆ ವಾಪಸಾಗುವ ನಿರೀಕ್ಷೆಯಿದೆ. ಡೇವಿಸ್‌ಕಪ್ ಕ್ವಾರ್ಟರ್ ಫೈನಲ್ ಪಂದ್ಯ ಎ.6 ರಿಂದ 8ರ ತನಕ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News