ಕಿರ್ಗಿಝ್‌ಸ್ತಾನಕ್ಕೆ ಶರಣಾದ ಭಾರತ ಅಜೇಯ ಗೆಲುವಿನ ಓಟ ಅಂತ್ಯ

Update: 2018-03-27 18:54 GMT

ಬಿಶ್ಕೆಕ್, ಮಾ.27: 2019ರ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಟೂರ್ನಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತದ ಫುಟ್ಬಾಲ್ ತಂಡ ಆತಿಥೇಯ ಕಿರ್ಗಿಝ್‌ಸ್ತಾನ ವಿರುದ್ಧ 1-2 ಅಂತರದಿಂದ ಸೋತಿದೆ. ಈ ಸೋಲಿನೊಂದಿಗೆ ಭಾರತದ ಸತತ 13 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.

 ಕಿರ್ಗಿಸ್ತಾನದ ಪರ 2ನೇ ನಿಮಿಷದಲ್ಲಿ ಗೋಲು ಬಾರಿಸಿದ ಅಂಟೊನ್ ಝೆಮ್ಲಿಯನುಖಿನ್ 1-0 ಮುನ್ನಡೆ ಒದಗಿಸಿಕೊಟ್ಟರು. 72ನೇ ನಿಮಿಷದಲ್ಲಿ ಗೋಲು ಬಾರಿಸಿದ ಮಿರ್ಲಾನ್ ಮುರ್ಝೆವ್ ತಂಡದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. 88ನೇ ನಿಮಿಷದಲ್ಲಿ ಗೋಲು ಬಾರಿಸಿದ ಜೇಜೆ ಲಾಲ್‌ಪೆಕುಲ್ವಾ ಭಾರತದ ಸೋಲಿನ ಅಂತರ ತಗ್ಗಿಸಿದರು.

ಈಗಾಗಲೇ ಮುಂದಿನ ವರ್ಷ ನಡೆಯಲಿರುವ ಏಷ್ಯನ್ ಕಪ್‌ಗೆ ಅರ್ಹತೆ ಪಡೆದಿರುವ ಭಾರತ ತಂಡದಲ್ಲಿ ಸ್ಟಾರ್ ಆಟಗಾರ ಸುನೀಲ್ ಚೆಟ್ರಿ ಅನುಪಸ್ಥಿತಿ ಎದ್ದು ಕಂಡಿತು.

ಚೆಟ್ರಿ ಸ್ಥಾನದಲ್ಲಿ ಆಡಿದ ಸ್ಟ್ರೈಕರ್ ಬಲ್ವಂತ್ ಸಿಂಗ್ 11 ನಿಮಿಷಗಳಲ್ಲಿ 2 ಬಾರಿ ಎದುರಾಳಿ ತಂಡಕ್ಕೆ ಗೋಲು ನಿರಾಕರಿಸಿದರು.ಜೇಜೆ ಬಾರಿಸಿದ ಏಕೈಕ ಗೋಲು ನೆರವಿನಿಂದ ಭಾರತ ಗ್ರೂಪ್ ಹಂತದಲ್ಲಿ ಒಟ್ಟು 13 ಅಂಕ ಗಳಿಸಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News