ಚೆಂಡು ವಿರೂಪಕ್ಕೆ ನೀಡಿರುವ ಶಿಕ್ಷೆ ಪ್ರಶ್ನಿಸಿದ ವಾರ್ನ್

Update: 2018-03-28 18:40 GMT

ಲಂಡನ್, ಮಾ.28: ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್‌ಗೆ ಕ್ರಿಕೆಟ್ ಆಸ್ಟ್ರೇಲಿಯ ವಿಧಿಸಿರುವ ಶಿಕ್ಷೆ ಅತ್ಯಂತ ತೀವ್ರತರವಾಗಿದೆ ಎಂದು ಆಸ್ಟ್ರೇಲಿಯದ ಸ್ಪಿನ್ ದಂತಕತೆ ಶೇನ್ ವಾರ್ನ್ ಅಭಿಪ್ರಾಯಪಟ್ಟಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯ ಆಟಗಾರರ ವರ್ತನೆಗೆ ವಿಶ್ವದಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಆದರೆ, ವಾರ್ನ್ ಪ್ರಕಾರ ಕ್ರಿಕೆಟ್ ಆಸ್ಟ್ರೇಲಿಯ ಆಟಗಾರರಿಗೆ ಕಠಿಣ ಶಿಕ್ಷೆ ನೀಡಿದೆ ಎಂದಿದ್ದಾರೆ.

‘‘ಆಸ್ಟ್ರೇಲಿಯ ಕ್ರಿಕೆಟ್ ತಂಡ ಪೂರ್ವಯೋಜಿತ ವಂಚನೆಯ ಘಟನೆಯಲ್ಲಿ ಭಾಗಿಯಾಗಿದ್ದು ಮುಜುಗರದ ವಿಷಯ. ವಿಶ್ವದಾದ್ಯಂತ ಉನ್ಮಾದ ಏರುತ್ತಿದೆ...ಆದರೆ, ಇದರಲ್ಲಿ ಆಟಗಾರರ ತಪ್ಪೇನಿದೆ? ದಕ್ಷಿಣ ಆಫ್ರಿಕ ತಂಡದ ನಾಯಕ ಎಫ್‌ಡು ಪ್ಲೆಸಿಸ್ ಎರಡು ಬಾರಿ ಚೆಂಡು ವಿರೂಪ ವಿವಾದದಲ್ಲಿ ಸಿಲುಕಿದ್ದರು. ಓಪನಿಂಗ್ ಬೌಲರ್ ಫಿಲ್ಯಾಂಡರ್ ಒಂದು ಬಾರಿ ಸಿಲುಕಿಕೊಂಡಿದ್ದರು. ಹಾಗಾಗಿ ಇಂತಹ ಪ್ರಕರಣದಲ್ಲಿ ಶಿಕ್ಷೆ ನೀಡುವುದು ಸರಿಯಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News