×
Ad

ಬೆಂಗಳೂರು; ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ಹತ್ತು ಮಂದಿಗೆ ಗಾಯ

Update: 2018-03-30 20:33 IST

ಬೆಂಗಳೂರು, ಮಾ. 30: ಶರವೇಗದಲ್ಲಿ ಬಂದ ಕೆಎಸ್ಸಾರ್ಟಿಸಿ ಬಸ್ ನಿಂತಿದ್ದ ಮರಳು ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ 10 ಜನರು ಗಾಯಗೊಂಡ ಘಟನೆ ಹೊಸಕೋಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.

ವರಲಕ್ಷ್ಮಿ(14), ಅನುಷಾ(22) ಎಂಬವವರಿಗೆ ತೀವ್ರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ಪೋಲಿಸರು ತಿಳಿಸಿದ್ದಾರೆ.

ಘಟನೆ ವಿವರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಸಂತೇ ಗೇಟ್‌ಬಳಿ ಕೋಲಾರದಿಂದ ಬೆಂಗಳೂರಿನತ್ತ ಶರವೇಗದಲ್ಲಿ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಕೆಟ್ಟು ನಿಂತಿದ್ದ ಮರಳು ಲಾರಿಗೆ ಗುದ್ದಿದ ಪರಿಣಾಮ, ಬಸ್ ಚಾಲಕ ಮಂಜುನಾಥ, ನಿರ್ವಾಹಕ ಹರೀಶ್‌ನ ಎರಡು ಕಾಲು ಮುರಿದಿವೆ.

ಇನ್ನುಳಿದಂತೆ, ಬಸ್‌ನಲ್ಲಿದ್ದ ಪ್ರಯಾಣಿಕರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ. ಈ ಸಂಬಂದ ಹೊಸಕೋಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಂಡಿರುವ ಪೋಲಿಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News