×
Ad

ಬೆಂಗಳೂರು: ಮಿಲ್ಸ್ ಕಂಪೆನಿ ಮಾಲೀಕನ ಉದ್ದಟತನದಿಂದ ಬೀದಿಗೆ ಬಿದ್ದ ಕಾರ್ಮಿಕರು; ಆರೋಪ

Update: 2018-03-30 22:36 IST

ಬೆಂಗಳೂರು,ಮಾ.30: ಇಲ್ಲಿನ ರಾಜಾಜಿನಗರ ಬಳಿಯ ರಾಮ್ ಕುಮಾರ್ ಮಿಲ್ಸ್ ಕಾರ್ಮಿಕರು ಕಂಪೆನಿ ಮಾಲೀಕನ ಉದ್ದಟತನದಿಂದ ಬೀದಿಗೆ ಬಂದಿದ್ದು, ಕಳೆದ ಶನಿವಾರ ಸುಮಾರು 40 ಮಂದಿ ಕೆಲಸ ಮುಗಿಸಿಕೊಂಡು ಹೋದವರು ಸೋಮವಾರ ಬೆಳಗ್ಗೆ ಮತ್ತೆ ಕೆಲಸಕ್ಕೆ ಬಂದಾಗ ಕಾರ್ಮಿಕರನ್ನು ಹೊರಕಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದರಲ್ಲಿ ಬಹುತೇಕರು 25 ವರ್ಷಕ್ಕೂ ಹೆಚ್ಚು ಕಾಲ ಇಲ್ಲೇ ಕೆಲಸ ಮಾಡಿಕೊಂಡಿದ್ದಾರೆ. ಈ ಹಠಾತ್ ಘಟನೆಯಿಂದ ವಿಚಲಿತರಾದ ಕಾರ್ಮಿಕರು ಧರಣಿ ಕುಳಿತಿದ್ದಾರೆ. ಕಳೆದ ಸೋಮವಾರದಿಂದಲೂ ಧರಣಿ ಮಾಡುತ್ತಿದ್ದರೂ ಯಾವೊಬ್ಬ ರಾಜಕಾರಣಿ, ಮಾಧ್ಯಮದವರು, ಕಾರ್ಮಿಕ ಸಂಘಗಳು ಇವರ ನೆರವಿಗೆ ಧಾವಿಸಿಲ್ಲ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News