×
Ad

ಮಾಜಿ ಶಾಸಕರಿಂದ ಹಣ ನೀಡದೆ ವಂಚನೆ: ಆರೋಪ

Update: 2018-03-31 22:44 IST

ಬೆಂಗಳೂರು, ಮಾ.31: ಮಾಜಿ ಶಾಸಕ ವೆಂಕಟಸ್ವಾಮಿ ಶಿಡ್ಲಘಟ್ಟ ತಾಲೂಕಿನ ಇದ್ದಲೂರು ಗ್ರಾಮದಲ್ಲಿ 26.6 ಎಕರೆ ಜಮೀನು ಖರೀದಿಸಿ, ಒಪ್ಪಂದದ ಸಮಯದಲ್ಲಿ ಮಾರಾಟವಾಗಿದ್ದ ಜಮೀನಿನ ಹಣ ನೀಡದೆ ವಂಚಿಸಿದ್ದಾರೆ ಎಂದು ರೈತ ಶ್ರೀನಿವಾಸ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಇದ್ದಲೂರು ಗ್ರಾಮದಲ್ಲಿ ನನ್ನ ಜಮೀನಿಗೆ ಪ್ರತಿ ಎಕರೆಗೆ 13 ಲಕ್ಷ 25 ಸಾವಿರದಂತೆ 26 ಎಕರೆಗೆ 3.46 ಕೋಟಿ ಹಣ ನೀಡುತ್ತೇನೆಂದು ಮಾಜಿ ಶಾಸಕ ವೆಂಕಟಸ್ವಾಮಿ ಖರೀದಿಸಿರುತ್ತಾರೆ. ಅವರ ಹೆಸರಿಗೆ ನೋಂದಣಿ ಮಾಡಿಸಿಕೊಂಡು ಈವರೆಗೂ ಹಂತ ಹಂತವಾಗಿ ಕೇವಲ 1.21 ಕೋಟಿ ರೂ. ನೀಡಿದ್ದಾರೆ. ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿ ಸಹಿ ಹಾಕಿಸಿಕೊಂಡು ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.

ಅವರ ಹೆಸರಿಗೆ ನೋಂದಣಿ ಮಾಡಿಸಿಕೊಂಡು ಖಾಲಿ ಹಾಳೆಯ ಮೇಲೆ ಸಹಿ ಪಡೆದು ಅನುಕೂಲಕ್ಕೆ ತಕ್ಕಂತೆ ಅವರ ಹೆಸರಿಗೆ ಮಾಡಿಕೊಂಡು ಅದನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಅವರ ಹೆಸರಿಗೆ ನೋಂದಣಿ ಸಮಯದಲ್ಲಿ ಎಲ್ಲಾ ಹಣವನ್ನು ನೀಡಲಾಗಿದೆ ಎಂದು ಹೇಳಿಕೆ ನೀಡಿರುವುದು ಆಘಾತ ಮೂಡಿಸಿದೆ. ಈ ಕುರಿತು ಅವರ ಮೇಲೆ ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದ್ದು, ಜಾರ್ಜ್ ಶೀಟ್ ಜಾರಿ ಮಾಡಲಾಗಿದೆ. ಜಮೀನಿಗೆ ಯಾರೂ ಪ್ರವೇಶಿಸದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ ಎಂದರು.

ನನ್ನ ಜಮೀನಿಗೆ ಅತಿಕ್ರಮವಾಗಿ ವೆಂಕಟಸ್ವಾಮಿ ಪ್ರವೇಶ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದಾಗ ನನ್ನ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಕುರಿತು ರಾಜಕೀಯ ನಾಯಕರ ಗಮನಕ್ಕೆ ತರಲಾಗಿದೆ. ಕೂಡಲೇ ಸರಕಾರ ನನಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News