×
Ad

ಬ್ರಿಗೇಡ್ ರಸ್ತೆಗೆ ಹೈಟೆಕ್ ಸ್ಪರ್ಷ

Update: 2018-03-31 23:46 IST

ಬೆಂಗಳೂರು, ಮಾ.31: ಚರ್ಚ್‌ಸ್ಟ್ರೀಟ್ ಮಾದರಿಯಲ್ಲೇ ನಗರದ ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ ಹಾಗೂ ಮ್ಯೂಸಿಯಂ ರಸ್ತೆಗಳು ಆಕರ್ಷಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬಿಬಿಎಂಪಿ ಯೋಜನೆ ರೂಪಿಸಿದೆ.

ವಾರಾಂತ್ಯದಲ್ಲಿ ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆಗಳು ಜನರನ್ನು ಆಕರ್ಷಿಸುವಂತೆ ಸ್ವಚ್ಛ, ಸುಂದರ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿ ನಿರ್ಧರಿಸಿದ್ದು, ಚರ್ಚ್ ಸ್ಟ್ರೀಟ್‌ಗೆ ಮಾದರಿಯಲ್ಲಿ ಕಾಬೂಲ್ ಗ್ರಾನೈಟ್ ಬಳಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ, ಗ್ರಾನೈಟ್ ಮೇಲೆ ಕಸೂತಿ ಕಲೆಗಳನ್ನು ಚಿತ್ರಸಿ ಅಳವಡಿಸುವ ಮೂಲಕ ಪಾದಚಾರಿ ಸ್ನೇಹ ರಸ್ತೆ ನಿರ್ಮಿಸಲಾಗುತ್ತಿದೆ ಎನ್ನಲಾಗಿದೆ.

ನೀರಿನ, ಒಳಚರಂಡಿ ಪೈಪ್‌ಗಳು ಓ.ಎಫ್.ಸಿ ಕೇಬಲ್, ವಿದ್ಯುತ್ ತಂತಿ ಸೇರಿ ಇನ್ನಿತರೆ ವಸ್ತುಗಳನ್ನು ಪಾದಚಾರಿ ಮಾರ್ಗದ ಕೆಳಭಾಗದಲ್ಲಿ ಅಳವಡಿಸಿ ಅವುಗಳ ದುರಸ್ತಿಗೆ ಡಕ್‌ಗಳನ್ನು ಅಳವಡಿಸಲಾಗುತ್ತದೆ. ಒಟ್ಟು 1,580ಮೀ. ಉದ್ದದ ರಸ್ತೆಯನ್ನು ಅಭಿವದ್ಧಿಪಡಿಸಲಾಗುತ್ತಿದೆ. ಮೂರು ರಸ್ತೆಗಳಲ್ಲೂ ಪಾದಚಾರಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಈ ಯೋಜನೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News