×
Ad

ಮನೆಯಂಗಳದಲ್ಲಿ ಸಸಿವೊಂದನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು: ಸಾಲುಮರದ ತಿಮ್ಮಕ್ಕ

Update: 2018-04-01 18:44 IST

ಬೆಂಗಳೂರು, ಎ.1: ಪ್ರತಿಯೊಬ್ಬ ನಾಗರಿಕನು ತಮ್ಮ ಮನೆಯಂಗಳದಲ್ಲಿ ಸಸಿವೊಂದನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು ಎಂದು ಪರಿಸರವಾದಿ ಡಾ.ಸಾಲುಮರದ ತಿಮ್ಮಕ್ಕ ತಿಳಿಸಿದ್ದಾರೆ.

ರವಿವಾರ ಕ್ಷೇತ್ರದ ಹೂಡಿಯಲ್ಲಿ ಭಾರತೀಯ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಒಂದು ಗಿಡ ನೆಟ್ಟರೆ, ಆ ಗಿಡ ಮರವಾಗಿ ನೂರಾರು ವರ್ಷ ಜೀವಂತವಾಗಿದ್ದು, ಸಾವಿರಾರು ಜನರಿಗೆ ವಿವಿಧ ರೀತಿಯಲ್ಲಿ ಉಪಯೋಗಕ್ಕೆ ಬರಲಿದೆ. ಹಾಗೂ ಪ್ರಾಣಿ, ಪಕ್ಷಿಗಳಿಗೆ ಆಶ್ರಯ ತಾಣವಾಗಲಿದೆ ಎಂದು ತಿಳಿಸಿದರು.

ಗಿಡ ನೆಡುವುದಕ್ಕಿಂತ ಪೂಣ್ಯದ ಕೆಲಸ ಮತ್ತೊಂದಿಲ್ಲ. ಗಿಡ ಮರವಾಗುವ ಹಂತಗಳನ್ನು ನೋಡುವುದೆ ಒಂದು ಸಂತಸದ ಕ್ಷಣಗಳು. ನಾವೇ ನೆಟ್ಟ ಗಿಡವೊಂದು ಮರವಾಗಿ ಸಮಾಜಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಎಷ್ಟೆಲ್ಲ ಉಪಯೋಗಕ್ಕೆ ಬರುತ್ತದೆ ಎಂಬುದನ್ನು ಕಣ್ಣಾರೆ ನೋಡುವಂತಹ ಭಾಗ್ಯ ನಿಮ್ಮದಾಗಬೇಕಾದರೆ ಪ್ರತಿಯೊಬ್ಬರು ತಮ್ಮ ಮನೆಯಂಗಳದಲ್ಲೊಂದು ಗಿಡನೆಡಬೇಕು ಎಂದು ಅವರು ಆಶಿಸಿದರು.

ಬಿಎಸ್‌ಎಸ್ ಸಂಘಟನೆಯ ರಾಜ್ಯಾಧ್ಯಕ್ಷ ರಾಮಚಂದ್ರ ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಕೊಡುಗೆ ಅವಿಸ್ಮರಣೀಯವಾಗಿದೆ. ಕುಟುಂಬದ ಬೆಳವಣಿಗೆಯಿಂದ ಪ್ರಾರಂಭಗೊಂಡು ಸಮಾಜದ ಹಿತವನ್ನು ಬಯಸುವ ಮಹಿಳೆಯರು ಅನುಭವ, ಮಾರ್ಗದರ್ಶದಲ್ಲಿ ನಾವು ಮುನ್ನಡೆಯಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಬಾಗೀನ ನೀಡಿ ಅಭಿನಂದಿಸಲಾಯಿತು. ಈ ವೇಳೆ ಸಮಾಜ ಸೇವಕಾರಾದ ಪ್ರಕಾಶ್ ಬಾಬು, ಕಿರಣ್ ಕುಮಾರ್, ಹರಿಕೃಷ್ಣ ಯಾದವ್, ಡಿ.ಎಂ.ನಾಗರಾಜ್, ಕೃಷ್ಣ, ಶ್ರೀನಿವಾಸ್, ಮಂಜುಳಾ ಅಕ್ಕಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News