×
Ad

ಸಾಹಿತ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

Update: 2018-04-01 18:50 IST

ಬೆಂಗಳೂರು, ಎ.1: ಅಡ್ವೈಸರ್ ಪತ್ರಿಕೆಯ 11ನೆ ವರ್ಷದ ವಾರ್ಷಿಕೊತ್ಸವದ ಅಂಗವಾಗಿ 2018ನೆ ಸಾಲಿನ ಅಡ್ವೈಸರ್ ಸಾಹಿತ್ಯ ಪ್ರಶಸ್ತಿಗಾಗಿ ಆರು ವಿಭಾಗದ ಎಂಟು ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನಿಸಿದೆ.

ಕವನ ಸಂಕಲನ, ಕಥಾಸಂಕಲನ, ಚುಟುಕು ಸಂಕಲನ, ಶರಣಸಾಹಿತ್ಯ, ಮಹಿಳಾ ಸಾಹಿತ್ಯ, ಪುಸ್ತಕಪ್ರಶಸ್ತಿ ಹಾಗೂ ವಿಭಾಗಗಳ ಪ್ರಶಸ್ತಿಗೆ ಕೃತಿಗಳನ್ನು ಕಳುಹಿಸಬಹುದು. ಎಂಟು ಪ್ರಶಸ್ತಿಗಳಿಗೂ 3ಸಾವಿರ ರೂ.ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ.

ಕವನ ಸಂಕಲನ ವಿಭಾಗದಲ್ಲಿ ಎರಡು ಪ್ರಶಸ್ತಿ ನೀಡಲಿದ್ದು, ಒಂದನ್ನು ಮಹಿಳಾ ವಿಭಾಗಕ್ಕೆ ಮೀಸಲಿಡಲಾಗಿದೆ. ಇನ್ನು, ಶರಣ ಸಾಹಿತ್ಯ ಪ್ರಶಸ್ತಿಗೆ ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಎಲ್ಲ ಪ್ರಕಾರಗಳಿಗೂ ಸ್ಫರ್ಧೆಗೆ ಅವಕಾಶವಿರುತ್ತದೆ. ಪುಸ್ತಕ ಪ್ರಶಸ್ತಿಯನ್ನು ಪುಸ್ತಕದ ವಿನ್ಯಾಸ ಹಾಗೂ ಮೌಲ್ಯದ ಆಧರದ ಮೇಲೆ ನೀಡಲಾಗುತ್ತದೆ.

ಆಸಕ್ತರು ಲೇಖಕರು 2017ನೆ ಸಾಲಿನಲ್ಲಿ ಪ್ರಕಟಗೊಂಡ ತಮ್ಮ ಕೃತಿಯ ಮೂರು ಪ್ರತಿ ಜೊತೆಗೆ, ಸ್ಫರ್ಧಿಸುತ್ತಿರುವ ವಿಭಾಗದ ಹೆಸರನ್ನು ಸ್ಫಷ್ಟವಾಗಿ ನಮೂದಿಸಿ, ಭಾವಚಿತ್ರ, ಸ್ವಪರಿಚಯದ ಮಾಹಿತಿಯನ್ನು ಸಂಪಾದಕರು, ಅಡ್ವೈಸರ್ ಮಾಸಪತ್ರಿಕೆ, ನಂ.1455 ಚಂದ್ರಗಿರಿ, ಡಾ.ರಾಜ್‌ಕುಮಾರ್ ಬಡಾವಣೆ ಮಂಡ್ಯ-2 ಈ ವಿಳಾಸಕ್ಕೆ ಮೇ.20ರೊಳಗೆ ಕಳುಹಿಸಿಕೊಡಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್‌ಸಂಖ್ಯೆ: 97397 43237ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News