×
Ad

ಶಿವಕುಮಾರ ಸ್ವಾಮೀಜಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಹಾರೈಕೆ

Update: 2018-04-01 19:00 IST

ಬೆಂಗಳೂರು, ಎ. 1: ನೂರಾ ಹನ್ನೊಂದನೇ ಹುಟ್ಟುಹಬ್ಬದ ಸುಸಂದರ್ಭದಲ್ಲಿ ತುಮಕೂರಿನ ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಕಾಮನೆಗಳನ್ನು ಸಲ್ಲಿಸಿದ್ದಾರೆ.

ಆಧ್ಯಾತ್ಮಕ ಲೋಕದಲ್ಲಿ ಆಗಸದ ಎತ್ತರಕ್ಕೆ ಬೆಳೆದಿದ್ದರೂ, ತಮ್ಮಲ್ಲಿ ಬರುವ ಭಕ್ತರಿಗೆ ಸಾಗರದಷ್ಟು ಪ್ರೀತಿ ತೋರುವ ತಮಗೆ ಹರಸುವಷ್ಟು ದೊಡ್ಡವನು ನಾನಲ್ಲ. ಆದರೆ, ರಾಜ್ಯದ ಹಲವು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಾವು ನನಗೆ ಪ್ರೇರಣೆಯಾಗಿದ್ದಿರಿ ಹಾಗೂ ಸ್ಫೂರ್ತಿಯಾಗಿದ್ದಿರಿ ಎಂಬುದನ್ನು ನಾನು ಸ್ಮರಿಸುತ್ತೇನೆ.

ಎಂಟು ದಶಕಗಳಿಗೂ ಹೆಚ್ಚು ಪವಿತ್ರ ಸನ್ಯಾಸಿಯ ಜೀವನವನ್ನು ನಡೆಸಿರುವ ತಾವು ಆಧ್ಯಾತ್ಮಿಕ ಲೋಕದಲ್ಲೂ ಶತಮಾನವನ್ನು ಪೂರ್ಣಗೊಳಿಸುವಿರಿ ಎಂಬ ವಿಶ್ವಾಸ ನನ್ನಲ್ಲಿದೆ. ತಮ್ಮನ್ನು ಕಾಣುವ ಭಾಗ್ಯ ಮುಂದಿನ ಹಲವು ಪೀಳಿಗೆಗಳಿಗೂ ಲಭಿಸಲಿ. ತಮ್ಮ ದಾರ್ಶನಿಕ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯದ ಜನತೆ ಮಾತ್ರವಲ್ಲ, ಇಡೀ ಭಾರತದ ಪ್ರತಿಯೊಬ್ಬರ ಭಾಗ್ಯದ ಬಾಗಿಲು ತೆರೆಯಲಿ ಎಂದು ಸಿದ್ದರಾಮಯ್ಯ ತಮ್ಮ ಸಂದೇಶದಲ್ಲಿ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News