×
Ad

ಪ್ರಕಾಶ್ ಅಂಬೇಡ್ಕರ್ ನಾಯಕತ್ವದ ಆರ್‌ಪಿಐಯಿಂದ ಚುನಾವಣೆಯಲ್ಲಿ 10 ಕ್ಷೇತ್ರಗಳಲ್ಲಿ ಸ್ಪರ್ಧೆ

Update: 2018-04-01 19:17 IST

ಬೆಂಗಳೂರು,ಎ.1: ಕರ್ನಾಟಕ ವಿಧಾನಸಭಾ ಚುನಾವಣೆಗೆ ಡಾ.ಬಿ.ಆರ್. ಅಂಬೇಡ್ಕರ್‌ರವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ನಾಯಕತ್ವದ ಭಾರತೀಯ ರಿಪಬ್ಲಿಕನ್ ಪಾರ್ಟಿ(ಕರ್ನಾಟಕ)ಯು 10 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.

ಹುಮನಾಬಾದ್-ಅಂಕುಶ್ ಗೋಖಲೆ, ಉಡುಪಿ-ಶೇಖರ್ ಹವಂಜೆ, ಬಾಗಲ ಕೋಟೆ-ಪರಶುರಾಮ್ ನೀಲನಾಯಕ, ಬಬಲೇಶ್ವರ್-ಶಾಸ್ತ್ರಿ ಹೊಸಮನಿ, ವಿಜಯನಗರ (ವಿಜಯಪುರ)-ಮುಕ್ತುಮ ಶಾಅಲಿ ನದಾಫ್, ಕೆಜಿಎಫ್-ಎಸ್.ಶಿವಲಿಂಗಂ, ಸಿ.ವಿ.ರಾಮನ್‌ನಗರ-ಆರ್.ಮೋಹನ್‌ರಾಜ್, ಎಚ್.ಡಿ.ಕೋಟೆ- ಜೆ.ಕೆ. ಗೋಪಾಲ್, ಪಿರಿಯಾಪಟ್ಟಣ-ಎಚ್.ಬಿ.ದೇವರಾಜ್, ಯಾದಗಿರಿ-ಈರಪ್ಪ ಎಂ.ಕಸನ್ ಸ್ಪರ್ಧಿಸುತ್ತಿದ್ದಾರೆಂದು ಆರ್‌ಪಿಐನ ರಾಜ್ಯಾಧ್ಯಕ್ಷ ಮೋಹನ್‌ರಾಜ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News