ಬೆಂಗಳೂರು: ಅವಿವಾಹಿತ ವೃದ್ದೆ ಆತ್ಮಹತ್ಯೆ
Update: 2018-04-01 20:59 IST
ಬೆಂಗಳೂರು, ಎ.1: ಅವಿವಾಹಿತ ವೃದ್ದೆಯೊರ್ವರು ನೇಣು ಹಾಕಿಕೊಂಡು ಸಾವಿಗೀಡಾಗಿರುವ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಸವೇಶ್ವರ ನಗರದ ಮೂರನೇ ಹಂತದ ನಿವಾಸಿ ನಾಗರತ್ನಮ್ಮ (62) ಮೃತ ದುರ್ದೈವಿ ಎಂದು ಪೊಲೀಸರು ಗುರುತಿಸಿದ್ದಾರೆ. ಒಂಟಿಯಾಗಿ ವಾಸವಿದ್ದ ಮೃತ ನಾಗರತ್ನಮ್ಮ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂದ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.