ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟ್ರೀಯ ಸಮಿತಿ: ಪದಾಧಿಕಾರಿಗಳ ಆಯ್ಕೆ

Update: 2018-04-01 17:15 GMT
ಮುಹಮ್ಮದ್ ಇಕ್ಬಾಲ್, ಇಬ್ರಾಹಿಂ ಹಾಜಿ, ಸೈಯದ್ ತ್ವಾಹ ಭಾಪಕಿ, ಯೂಸುಫ್ ಅರ್ಲಪದವು

ದುಬೈ, ಎ. 1: ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟ್ರೀಯ ಸಮಿತಿ ಇದರ 19ನೆ ಮಹಾ ಸಭೆಯು ದುಬೈಯ ಪೋಯಿನಿಕ್ಸ್ ಹೋಟೆಲ್ ಸಭಾಂಗಣದಲ್ಲಿ  ಡಿ.ಕೆ.ಎಸ್.ಸಿ ಯು.ಎ.ಇ. ರಾಷ್ಟೀಯ ಸಮಿತಿ ಗೌರವಾಧ್ಯಕ್ಷ  ಸೈಯದ್ ತ್ವಾಹ ಭಾಪಕಿ  ತಂಙಳ್ ಅವರ ಉಪ ಸ್ಥಿತಿಯಲ್ಲಿ, ರಾಷ್ಟೀಯ ಸಮಿತಿ ಅಧ್ಯಕ್ಷ  ಹಾಜಿ ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯನ್ನು ಸೈಯದ್ ತ್ವಾಹ ಭಾಪಕಿ ತಂಙಳ್  ದುವಾದೊಂದಿಗೆ ರಾಷ್ಟೀಯ ಸಮಿತಿ ಸಲಹೆಗಾರರಾದ ಇಬ್ರಾಹಿಂ ಸಖಾಫಿ ಕೆದಂಬಾಡಿ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಎಸ್.ಯೂಸುಫ್ ಅರ್ಲಪದವು ಸ್ವಾಗತಿಸಿದರು. ಗತ ವರ್ಷದ ವರದಿಯನ್ನು ಜೊತೆ ಕಾರ್ಯದರ್ಶಿ ಬದ್ರುದ್ದೀನ್ ಅರಂತೋಡ್  ವರದಿ ವಾಚಿಸಿ, ಲೆಕ್ಕ ಪತ್ರವನ್ನು ಕೋಶಾಧಿಕಾರಿ ಇಬ್ರಾಹಿಂ ಹಾಜಿ ಕಿನ್ಯ ಹಾಗೂ ಲೆಕ್ಕಪರಿಶೋಧಕರಾದ ಅಬ್ದುಲ್ಲ ಪೆರುವಾಯಿ ಮಂಡಿಸಿದರು.

2018 - 19ರ ಸಾಲಿನ ನೂತನ ಸಮಿತಿಯನ್ನು ಚುನಾವಣಾಧಿಕಾರಿಯಾಗಿ ಡಿ.ಕೆ.ಎಸ್.ಸಿ ಯ ಹಿರಿಯ ನೇತಾರರಾದ ಹಾಜಿ.ಎಂ .ಇ. ಮೂಳೂರು ನಡೆಸಿಕೊಟ್ಟರು. ನೂತನ  ಸಮಿತಿಗೆ  ಹಾಜಿ. ಎಂ.ಕೆ.ಬ್ಯಾರಿ ಕಕ್ಕಿಂಜೆ, ಹುಸೈನ್ ಹಾಜಿ ಕಿನ್ಯ, ಇ.ಕೆ.ಇಬ್ರಾಹಿಂ ಕಿನ್ಯ, ಅಬೂಬಕರ್ ಮದನಿ ಕೆಮ್ಮಾರ,  ಅಬ್ಧುಲ್ಲ ಮುಸ್ಲಿಯಾರ್ ಕುಡ್ತಮುಗೆರು, ಅಬ್ದುಲ್ ಲತೀಫ್ ಮುಲ್ಕಿ ಮುಂತಾದವರು ಶುಭ ಹಾರೈಸಿದರು.

ಹಾಜಿ.ನವಾಝ್ ಕೋಟೆಕ್ಕಾರ್  ಡಿ.ಕೆ.ಎಸ್.ಸಿ ಯ ಸಿಲ್ವರ್ ಕಾರ್ಡ್ ಯೋಜನೆಯ ಬಗ್ಗೆ ವಿವರಿಸಿದರು. ಸಭೆಯು ಪ್ರಾರಂಭ ದಲ್ಲಿ ಜೊತೆ ಕಾರ್ಯದರ್ಶಿ ಕಮರುದ್ದೀನ್ ಗುರುಪುರ  ಕಾರ್ಯಕ್ರಮ ನಿರ್ವಹಿಸಿ, ಜೊತೆ ಕಾರ್ಯದರ್ಶಿ ಮೊಹಿಯುದ್ದೀನ್ ಕುಂದಾಪುರ ವಂದಿಸಿದರು.

2018 - 19ನೇ  ಸಾಲಿನ ನೂತನ ಸಮಿತಿ ರಚಿಸಲಾಯಿತು

ಗೌರವಾಧ್ಯಕ್ಷರಾಗಿ ಸೈಯದ್ ತ್ವಾಹ ಬಾಫಕಿ ತಂಙಳ್, ಸಲಹೆಗಾರರಾಗಿ ಹಾಜಿ.ಎಂ.ಕೆ.ಬ್ಯಾರಿ ಕಕ್ಕಿಂಜೆ, ಹುಸೈನ್ ಹಾಜಿ ಕಿನ್ಯ, ಸೈಯದ್ ಅಸ್ಗರ ಅಲಿ ತಂಙಳ್ ಕೋಳ್ಪೆ, ಹಸನಬ್ಬ ಕೊಲ್ನಾಡ್, ಧಾರ್ಮಿಕ ಸಲಹೆಗಾರರಾಗಿ ಇಬ್ರಾಹಿಂ ಸಖಾಫಿ ಕೆದಂಬಾಡಿ,  ಅಬ್ದುಲ್ಲ ಮುಸ್ಲಿಯಾರ್ ಕುಡ್ತಮುಗೆರು, ಅಬೂಬಕರ್ ಮದನಿ ಕೆಮ್ಮಾರ, ಶಾಫಿ ಸಖಾಫಿ ಕರಿಂಬಿಲ, ಅಧ್ಯಕ್ಷರಾಗಿ ಹಾಜಿ. ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಯೂಸುಫ್ ಅರ್ಲಪದವು, ಕೋಶಾಧಿಕಾರಿಯಾಗಿ ಇಬ್ರಾಹಿಂ ಹಾಜಿ ಕಿನ್ಯ, ಉಪಾದ್ಯಕ್ಷರುಗಳಾಗಿ ಹಾಜಿ.ಎಂ.ಇ.ಮೂಳೂರು, ಅಬ್ದುಲ್ಲ ಹಾಜಿ ಬೀಜಾಡಿ, ಹಾಜಿ.ಎಸ್.ಕೆ. ಅಬ್ದುಲ್ ಖಾದರ್ ಉಚ್ಹಿಲ, ಅಬ್ದುಲ್ ರಹಿಮಾನ್ ಸಜಿಪ, ಅಬ್ದುಲ್ ಲತೀಫ್ ಮುಲ್ಕಿ,  ಇಕ್ಬಾಲ್ ಕುಂದಾಪುರ, ಜೊತೆ ಕಾರ್ಯದರ್ಶಿಯಾಗಿ ಹಾಜಿ. ನವಾಝ್ ಕೊಟೆಕ್ಕಾರ್,  ಕಮರುದ್ದೀನ್ ಗುರುಪುರ, ಮೊಹಿಯುದ್ದೀನ್ ಕುಂದಾಪುರ, ಬದ್ರುದ್ದೀನ್  ಅರಂತೋಡು, ಲೆಕ್ಕ ಪರಿಶೋಧಕರಾಗಿ ಅಬ್ದುಲ್ಲ ಕುಂಞಿ ಪೆರುವಾಯಿ, ಸಹ ಲೆಕ್ಕ ಪರಿಶೋಧಕರಾಗಿ ಹಸನ್ ಬಾವ ಹಳೆಯಂಗಡಿ, ಸಂಚಾಲಕರಾಗಿ ಹಾಜಿ ಅಬ್ದುಲ್ ರಹಿಮಾನ್ ಸಂಟ್ಯಾರ್, ಮುಹಮ್ಮದ್ ಶುಕೂರ್ ಮಣಿಲ, ಇಬ್ರಾಹಿಂ ಕಳತ್ತೂರು, ಶೇಖಬ್ಬ ಕಿನ್ಯ, ಅಶ್ರಫ್ ಸತ್ತಿಕಲ್ , ನಝೀರ್ ಕಣ್ಣಂಗಾರ್, ಅಫ್ಝಲ್ ಮಂಗಳೂರು, ಇ.ಕೆ.ಇಬ್ರಾಹಿಂ ಕಿನ್ಯ, ಅಬ್ದುಲ್ ಹಮೀದ್ ಸುಳ್ಯ,  ಬಶೀರ್ ಕಾಪಿಕ್ಕಾಡ್, ಅಶ್ರಫ್ ಉಳ್ಳಾಲ,  ಉಮರ್ ಸುಳ್ಯ ,ಇಸ್ಮಾಯಿಲ್ ಬಾಬಾ ಮೂಳೂರು, ಅಬ್ದುಲ್ ರಝಾಕ್ ಸೊಂಪಾಡಿ, ಸುಹೈಲ್ ಬಜ್ಪೆ, ಮುಹಮ್ಮದಾಲಿ ಮೂಡುತೋಟ, ರಜಬ್ ಉಚ್ಚಿಲ ಹಾಗೂ ಉಳಿದ ಯುನಿಟ್ ಪ್ರತಿನಿಧಿಗಳನ್ನು ಕಾರ್ಯಕಾರಿ ಸಮಿತಿ ಹಾಗೂ ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News