×
Ad

ಶಾಸಕ ಮುನಿರತ್ನರಿಂದ ಮತದಾರರಿಗೆ ಆಮೀಷ ಆರೋಪ: ಸಾವಿರಾರು ರೂ.ಮೌಲ್ಯದ ಕುಕ್ಕರ್, ಸೀರೆ ವಶ

Update: 2018-04-01 23:47 IST

ಬೆಂಗಳೂರು, ಎ.1: ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಮುನಿರತ್ನ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದಾರೆ ಎಂಬ ಆರೋಪದಡಿ ಸಾವಿರಾರು ರೂ. ಮೌಲ್ಯದ ಪ್ರೆಷರ್ ಕುಕ್ಕರ್, ಸೀರೆ ಹಾಗೂ ವಾಟರ್ ಕ್ಯಾನ್‌ಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ರವಿವಾರ ಚುನಾವಣಾ ಆಯೋಗದ ಜಾಗೃತ ದಳದ ಅಧಿಕಾರಿಗಳು ದೂರುದಾರರ ಮಾಹಿತಿಯೆ ಮೇರೆಗೆ ಲಗ್ಗೇರೆಯ ಲಕ್ಷ್ಮಿದೇವಿನಗರದ ಎರಡು ಕಡೆ ದಾಳಿ ನಡೆಸಿ ತಪಾಸಣೆ ನಡೆಸಿದ್ದು, ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಕುಕ್ಕರ್, ಸೀರೆಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಳ್ಳಲಾದ ಕುಕ್ಕರ್ ಹಾಗೂ ಸೀರೆಗಳ ಮೇಲೆ ಶಾಸಕ ಮುನಿರತ್ನರವರ ಭಾವಚಿತ್ರಗಳು ಇರುವುದನ್ನು ಚುನಾವಣಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕಾರ್ಯಾಚರಣೆ ನಡೆದಿರುವ ಸ್ಥಳಕ್ಕೆ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಭೇಟಿ ನೀಡಿ ದೂರು ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News