×
Ad

ಎ.8 ರಿಂದ 14ರವರೆಗೆ ಬೂತ್ ಮಟ್ಟದಲ್ಲಿಯೆ ಗುರುತಿನ ಚೀಟಿ ಪಡೆಯಲು ಅವಕಾಶ: ಸಂಜೀವ್‌ ಕುಮಾರ್

Update: 2018-04-02 19:06 IST

ಬೆಂಗಳೂರು, ಎ.2: ರಾಜ್ಯದಲ್ಲಿ ಈಗಾಗಲೇ 4 ಕೋಟಿ 96 ಲಕ್ಷ ಮಂದಿ ಮತದಾರರಿದ್ದು, 1 ಲಕ್ಷ 76 ಸಾವಿರ 313 ಜನರು ಮತದಾನದ ಗುರುತಿನ ಚೀಟಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಎ.8ರಿಂದ 14ರವರೆಗೆ ಪೂಲಿಂಗ್ ಬೂತ್ ಮಟ್ಟದಲ್ಲಿಯೇ ಮತದಾನದ ಗುರುತಿನ ಚೀಟಿ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. 15,500 ಜನ ಮತದಾರರು ಬೇರೆ ವಿಧಾನಸಭಾ ಕ್ಷೇತ್ರಕ್ಕೆ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದು, ಈಗಾಗಲೇ ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News