×
Ad

ಉಜ್ವಲ ಉದ್ಯಮಿ ಪ್ರಶಸ್ತಿಗೆ ಅರ್ಜಿ ಆಹ್ವಾನ: ಹನುಮಂತೇಗೌಡ

Update: 2018-04-02 21:40 IST

ಬೆಂಗಳೂರು, ಎ. 2: ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಕರ್ನಾಟಕ ಸಣ್ಣ ಕೈಗಾರಿಕಾ ಸಂಸ್ಥೆ (ಕಾಸಿಯಾ)ಯಿಂದ ಉಜ್ವಲ ಉದ್ಯಮಿ ಪ್ರಶಸ್ತಿ ನೀಡಲಾಗುತ್ತಿದ್ದು, ಆಸಕ್ತರು ಎ.25ರೊಳಗೆ ಪ್ರವೇಶ ಪತ್ರಗಳನ್ನು ಕಳುಹಿಸಬಹುದು ಎಂದು ಕಾಸಿಯಾ ಅಧ್ಯಕ್ಷ ಹನುಮಂತೇಗೌಡ ಮನವಿ ಮಾಡಿದ್ದಾರೆ.

ಸೋಮವಾರ ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಮಟ್ಟದ ಉತ್ಪನ್ನಗಳು ಮತ್ತು ಸೇವೆಗಳ ಅಭಿವೃದ್ಧಿಯಲ್ಲಿ ಇತ್ತೀಚಿನ ತಂತ್ರಜ್ಞಾನ, ಉತ್ಪಾದನೆ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಅಳವಡಿಸಿಕೊಂಡಿರುವ ಉದ್ಯಮಗಳನ್ನು ಪ್ರೋತ್ಸಾಹಕ್ಕೆ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯನ್ನು ಎಸ್‌ಬಿಐ ಮತ್ತು ಐಎಂಎ ಜ್ಯುವೆಲರ್ಸ್‌ ಪ್ರಾಯೋಜಕತ್ವದಲ್ಲಿ ಕಾಸಿಯಾದಿಂದ ನೀಡಲಾಗುತ್ತಿದೆ. ಆಗ್ರೋ ಫುಡ್ ಪ್ರೊಸೆಸಿಂಗ್, ಹ್ಯಾಂಡಿ ಕ್ರಾಫ್ಟ್, ಎಂಜಿನಿಯರಿಂಗ್ ಫ್ಯಾಬ್ರಿಕೇಷನ್, ಟೂಲ್ ಆಂಡ್ ಡೈ ಮೇಕಿಂಗ್, ಆಟೊ ಕಾಂಪೋನೆಂಟ್ಸ್, ಏರೋಸ್ಪೇಸ್, ಡಿಸೈನ್ಸ್ ಸೇರಿ ಇನ್ನಿತರ ವಲಯಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ ಎಂದರು.

9 ವಿಶೇಷ ಪ್ರಶಸ್ತಿ ನೀಡಲಾಗುತ್ತಿದ್ದು, ಅದರಲ್ಲಿ ‘ಕಾಸಿಯಾ ರತ್ನ’ ಪ್ರಶಸ್ತಿಯು ಒಂದಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ ಮಯ್ಯಿಸ್ ಕಂಪೆನಿಯ ಅಧ್ಯಕ್ಷ ಸದಾನಂದಮಯ್ಯ ಆಯ್ಕೆ ಮಾಡಲಿದ್ದಾರೆ. ಆಯ್ಕೆ ತಂಡವು ಆರು ಮಂದಿ ತೀರ್ಪುಗಾರರನ್ನು ಒಳಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.

ಆಸಕ್ತರು ಪ್ರವೇಶ ಪತ್ರಗಳನ್ನು ಬೆಂಗಳೂರಿನ ಕಾಸಿಯಾ ಭವನದಲ್ಲಿ ಪಡೆದುಕೊಳ್ಳಬಹುದು. ಅಥವಾ ಸಂಘದ ವೆಬ್ ಸೈಟ್‌ನಿಂದ ಪಡೆಯಬಹುದು. ಪ್ರಶಸ್ತಿಗೆ ಆಯ್ಕೆ ಮಾಡಲು ಹಲವು ನಿಬಂಧನೆಗಳಿವೆ. ಪುರಸ್ಕೃತರಿಗೆ ಮೇ 5ರಂದು ಕಾಸಿಯಾ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News