×
Ad

ಬಿ.ಎಸ್. ಮುಹಮ್ಮದ್ ಮೋನು

Update: 2018-04-02 22:35 IST

ಮಂಗಳೂರು, ಎ. 2: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿಯ ಉಪಾಧ್ಯಕ್ಷ, ದಾರುಲ್ ಕುರ್‌ಆನ್ ಕಿಸಾ ಶರೀಅತ್ ಕಾಲೇಜಿನ ಉಪಾಧ್ಯಕ್ಷ, ಸುನ್ನೀಸಂದೇಶ ಪತ್ರಿಕೆಯ ನಿರ್ದೇಶಕರೂ ಆಗಿರುವ ಎ.ಎಚ್. ನೌಷಾದ್ ಹಾಜಿ ಸೂರಲ್ಪಾಡಿ ಅವರ ಮಾವ ಬಿ.ಎಸ್. ಬಸ್ಸು, ಲಾರಿ ಮಾಲಕರಾಗಿದ್ದ ವಾದಿಸ್ಸಲಾಮ ಗಂಜಿಮಠ ಬಿ.ಎಸ್. ಮುಹಮ್ಮದ್ ಮೋನು (55)  ನಿಧನಹೊಂದಿದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರ ಸಹಿತ ಬಂಧು, ಬಳಗವನ್ನು ಅಗಲಿದ್ದಾರೆ.ಮುಹಮ್ಮದ್ ಮೋನುರವರ ನಿಧನಕ್ಕೆ ಸುನ್ನೀಸಂದೇಶ ಪತ್ರಿಕೆಯ ಪ್ರಧಾನ ನಿರ್ದೇಶಕ ಪಾಣಕ್ಕಾಡ್ ಸಾದಿಕಲಿ ಶಿಹಾಬ್ ತಂಙಳ್, ಖಾಸಿಮ್ ಉಸ್ತಾದ್ ಕುಂಬಳೆ, ಹಾಜಿ ಕೆ.ಎಸ್. ಹೈದರ್ ದಾರಿಮಿ, ಮುಸ್ತಫ ಫೈಝಿ ಕಿನ್ಯ, ಎಂ.ಎ. ಅಬ್ದುಲ್ಲ ಹಾಜಿ ಬೆಳ್ಮ ರೆಂಜಾಡಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ ಕಣ್ಣೂರು, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಉಮರ್ ದಾರಿಮಿ ಪಟ್ಟೋರಿ, ಸಿದ್ಧೀಕ್ ಫೈಝಿ ಕರಾಯ, ಇಬ್ರಾಹೀಂ ಕುಂಬಂಕುದಿ, ಮುನೀರ್ ದಾರಿಮಿ ಗೂನಡ್ಕ, ಬಶೀರ್ ಅಝ್‌ಹರಿ ಬಾಯಾರ್, ರಫೀಕ್ ಅಜ್ಜಾವರ, ಜಲೀಲ್ ಅಲ್‌ರು, ಸಾಹುಲ್ ಹಮೀದ್ ಐವರ್ನಾಡ್, ಹಸನ್ ಬೆಂಗರೆ ಹಾಗೂ ಸುನ್ನೀಸಂದೇಶ ಪತ್ರಿಕಾ ಬಳಗ ಹಾಗೂ ಕಿಸಾ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News