ನಾವು ಎಸ್‌ಸಿ,ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ವಿರೋಧಿಯಲ್ಲ ಎಂದ ಸುಪ್ರೀಂಕೋರ್ಟ್

Update: 2018-04-03 09:54 GMT

ಹೊಸದಿಲ್ಲಿ, ಎ.3: ನಾವು ಎಸ್‌ಸಿ,ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ವಿರುದ್ಧವಿಲ್ಲ, ನಮ್ಮ ತೀರ್ಪಿನ ಉದ್ದೇಶ ಅಮಾಯಕರ ರಕ್ಷಣೆ ಮಾತ್ರ, ಪ್ರತಿಭಟನಾಕಾರರು ಸುಪ್ರೀಂಕೋರ್ಟಿನ ತೀರ್ಪಿನ ವಿವರ ಓದಿಲ್ಲ ಎಂದು ಸುಪ್ರೀಂಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.

ಸುಪ್ರೀಂಕೋರ್ಟಿನ ತೀರ್ಪಿನ ಬಗ್ಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ ಕಾರಣ ಕೇಂದ್ರ ಸರಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಇಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮೇಲಿನಂತೆ ಅಭಿಪ್ರಾಯಪಟ್ಟಿದೆ.

    ಸುಪ್ರೀಂಕೋರ್ಟ್ ಮಾ.22 ರಂದು ನೀಡಿರುವ ತೀರ್ಪಿನಲ್ಲಿ, ಎಸ್‌ಸಿ,ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ದೂರು ನೀಡಿದಾಕ್ಷಣ ಆರೋಪಿ ಬಂಧನ ಸರಿಯಲ್ಲ. ದೌರ್ಜನ್ಯ ಪ್ರಕರಣ ದಾಖಲಾದ ಕೂಡಲೇ ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳುವ ಮೊದಲು ಪೊಲೀಸರು ಘಟನೆ ನಡೆದ ಏಳು ದಿನದೊಳಗೆ ಪ್ರಾಥಮಿಕ ತನಿಖೆ ನಡೆಸಬೇಕು ಎಂದು ಹೇಳಿತ್ತು.

ಸುಪ್ರೀಂಕೋರ್ಟ್ ಈ ಅಭಿಪ್ರಾಯ ಖಂಡಿಸಿ ಸೋಮವಾರ ರಾಷ್ಟ್ರವ್ಯಾಪಿ ನಡೆದ ಭಾರತ ಬಂದ್ ಹಿನ್ನೆಲೆಯಲ್ಲಿ ಹಿಂಸಾಚಾರ ನಡೆದಿದ್ದು ಏಳು ಮಂದಿ ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News