ವಿಧಾನಸಭಾ ಚುನಾವಣೆ: ನೋಡಲ್ ಅಧಿಕಾರಿಗಳ ನೇಮಕ

Update: 2018-04-03 17:08 GMT

ಬೆಂಗಳೂರು, ಎ.3: ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಚುನಾವಣೆಗಳ ವಿಷಯಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ನೇಮಕ ಮಾಡಿದ್ದು, ಚುನಾವಣಾ ವಿಷಯಗಳಿಗೆ ಈ ನೋಡಲ್ ಅಧಿಕಾರಿಗಳನ್ನು ನೇರವಾಗಿ ಇಲ್ಲವೆ ಖುದ್ದಾಗಿ ಅವರ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಡಾ.ಜಗದೀಶ್: ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ-1, 2ನೆ ಮಹಡಿ, ‘ಬಿ’ ಬ್ಲಾಕ್, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು-560001. ಇವರನ್ನು ಮಾದರಿ ಚುನಾವಣಾ ನೀತಿ ಸಂಹಿತೆ, ಕಾನೂನು ಮತ್ತು ಸುವ್ಯವಸ್ಥೆ, ಚುನಾವಣಾ ವೆಚ್ಚ ಪರಿಶೀಲನೆ, ಬೆಂಗಳೂರು ವಿಭಾಗದ ಚುನಾವಣಾ ವಿಷಯಗಳ ಮೇಲ್ವಿಚಾರಣೆ, ಸಹಾಯವಾಣಿ ಮತ್ತು ದೂರುಗಳ ಉಸ್ತುವಾರಿಗೆ ಸಂಬಂಧಿಸಿದಂತೆ ದೂರವಾಣಿ ಸಂಖ್ಯೆ: 080-22288821, ಮೊಬೈಲ್ ಸಂಕ್ಯೆ: 9739629346, ಇಲ್ಲವೇ ಇಮೇಲ್: additionalceo1.karnataka@gmail.com ಮೂಲಕ ಸಂಪರ್ಕಿಸಬಹುದು.

ಉಜ್ವಲ್‌ಕುಮಾರ್ ಘೋಷ್: ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ-2, ನಿರ್ವಾಚನ ನಿಲಯ, ಶೇಷಾದ್ರಿ ರಸ್ತೆ, ಬೆಂಗಳೂರು-560001 ಇವರನ್ನು ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ದತ್ತಾಂಶ, ಸಾರಿಗೆ ನಿರ್ವಹಣೆ, ಮತ ಎಣಿಕೆ ಕೇಂದ್ರ ಮತ್ತು ಸ್ಟ್ರಾಂಗ್ ರೂಂ, ಚುನಾವಣೆಗೆ ನಿಯೋಜನೆಗೊಳ್ಳುವವರ ಕಲ್ಯಾಣ ಕಾರ್ಯಕ್ರಮ, ಕಾನೂನಿಗೆ ಸಂಬಂಧಿಸಿದ ವಿಷಯಗಳು ಮತ್ತು ವಸತಿ ಹಾಗೂ ಮೈಸೂರು ವಿಭಾಗದ ಚುನಾವಣಾ ವಿಷಯಗಳ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ದೂರವಾಣಿ ಸಂಖ್ಯೆ: 080-22242024, ಮೊಬೈಲ್ ಸಂಖ್ಯೆ: 7338525461, ಇಲ್ಲವೇ ಇಮೇಲ್ : additionalceo.kar@gmail.com ಮೂಲಕ ಸಂಪರ್ಕಿಸಬಹುದು.

ಕೆ.ಎನ್.ರಮೇಶ್: ಜಂಟಿ ಮುಖ್ಯ ಚುನಾವಣಾಧಿಕಾರಿ-1, ನಿರ್ವಾಚನ ನಿಲಯ, ಶೇಷಾದ್ರಿ ರಸ್ತೆ, ಬೆಂಗಳೂರು-560001, ಇವರನ್ನು ಮತದಾರರ ಪಟ್ಟಿ, ಸಾಮಗ್ರಿಗಳ ನಿರ್ವಹಣೆ, ಬ್ಯಾಲೆಟ್ ಪೇಪರ್, ಡಮ್ಮಿ ಬ್ಯಾಲೆಟ್ ಪೇಪರ್, ಪೋಸ್ಟಲ್ ಬ್ಯಾಲೆಟ್ ಪೇಪರ್, ಪರಿವೀಕ್ಷಕರ ಶಿಷ್ಟಾಚಾರ, ಮತಗಟ್ಟೆ ಕೇಂದ್ರ, ಅಂಗವಿಕಲರಿಗೆ ಅಗತ್ಯ ಸೌಲಭ್ಯಗಳು ಸೇರಿದಂತೆ ಕನಿಷ್ಠ ಸೌಲಭ್ಯಗಳ ಖಾತ್ರಿ, ನಾಮಪತ್ರ ಮತ್ತು ಭದ್ರತಾ ನಿರ್ವಹಣೆ, ಶಾಸನಬದ್ಧ ಅಧಿಸೂಚನೆಗಳು ಮತ್ತು ಸುತ್ತೋಲೆ ಹಾಗೂ ಕಲಬುರಗಿ ವಿಭಾಗದ ಚುನಾವಣಾ ವಿಷಯಗಳ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ದೂರವಾಣಿ ಸಂಖ್ಯೆ: 080-22234198, ಮೊಬೈಲ್ ಸಂಖ್ಯೆ: 9448300549, ಇಲ್ಲವೆ ಇಮೇಲ್: jointceo.karnataka2018@gmail.com ಮೂಲಕ ಸಂಪರ್ಕಿಸಬಹುದು.

ಎ.ವಿ.ಸೂರ್ಯಸೇನ್: ಜಂಟಿ ಮುಖ್ಯ ಚುನಾವಣಾಧಿಕಾರಿ-2, 2ನೆ ಮಹಡಿ, ‘ಬಿ’ ಬ್ಲಾಕ್, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು-560001, ಇವರನ್ನು ಗಣಕೀಕರಣ ಮತ್ತು ಐಟಿ ನಿರ್ವಹಣೆ, ಇಸಿಐ ಮತ್ತು ಆ್ಯಪ್, ಇಎಂಎಸ್ ನಿರ್ವಹಣೆ, ಸಂವಹನ ಕ್ರಿಯಾಯೋಜನೆ, ಮತಗಟ್ಟೆಗಳ ಮ್ಯಾಪಿಂಗ್, ಸಿಇಒ ಮತ್ತು ಜಿಲ್ಲಾ ವೆಬ್‌ಸೈಟ್‌ಗಳ ನಿರ್ವಹಣೆ, ಮಾಧ್ಯಮ ಘಟಕ, ಮಾಧ್ಯಮ ತಂಡ, ಮಾಧ್ಯಮ ನಿರ್ವಹಣೆ, ಸಾಮಾಜಿಕ ಜಾಲತಾಣ ಮತ್ತು ಬೆಳಗಾವಿ ವಿಭಾಗದ ಚುನಾವಣಾ ವಿಷಯಗಳ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ದೂರವಾಣಿ ಸಂಖ್ಯೆ: 080-22288822, ಮೊಬೈಲ್ ಸಂಖ್ಯೆ: 9410992281, ಇಲ್ಲವೇ ಇಮೇಲ್: jointceo2.kar@gmail.com ಮೂಲಕ ಸಂಪರ್ಕಿಸಬಹುದು.

ಡಾ.ಬಿ.ಆರ್.ಮಮತಾ: ಜಂಟಿ ಮುಖ್ಯ ಚುನಾವಣಾಧಿಕಾರಿ-3, 2ನೆ ಮಹಡಿ, ‘ಬಿ’ ಬ್ಲಾಕ್, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು- 560001, ಇವರನ್ನು ಮಾಧ್ಯಮಕ್ಕೆ ಸಂಬಂಧಿಸಿದ ವಿಷಯಗಳು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಸಂಯೋಜನೆಗೆ ಸಂಬಂಧಿಸಿದಂತೆ ಮೊಬೈಲ್ ಸಂಖ್ಯೆ: 9980082368, ಇಲ್ಲವೇ ಇಮೇಲ್: jointceo.kar18@gmail.com ಮೂಲಕ ಸಂಪರ್ಕಿಸಬಹುದು.

ರಾಘವೇಂದ್ರ: ಉಪ ಮುಖ್ಯ ಚುನಾವಣಾಧಿಕಾರಿ-1, ನಿರ್ವಾಚನ ನಿಲಯ, ಶೇಷಾದ್ರಿ ರಸ್ತೆ, ಬೆಂಗಳೂರು-560001, ಇವರನ್ನು ಮತಯಂತ್ರ ಮತ್ತು ವಿವಿಪ್ಯಾಟ್ ಹಾಗೂ ಇವುಗಳಿಗೆ ಸಂಬಂಧಿಸಿದ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳಿಗಾಗಿ ದೂರವಾಣಿ ಸಂಕ್ಯೆ: 080-2224195, ಮೊಬೈಲ್ ಸಂಖ್ಯೆ: 9886780462, ಇಲ್ಲವೇ ಇಮೇಲ್: deputyceo.karnataka@gmail.com ಮೂಲಕ ಸಂಪರ್ಕಿಸಬಹುದು.

ಎಚ್.ಜ್ಞಾನೇಶ್: ಉಪ ಮುಖ್ಯಚುನಾವಣಾಧಿಕಾರಿ-3, 2ನೆ ಮಹಡಿ, ‘ಬಿ’ ಬ್ಲಾಕ್, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು-560001, ಇವರನ್ನು ತರಬೇತಿ, ಚುನಾವಣಾ ವೆಚ್ಚ ನಿರ್ವಹಣೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಪಡೆಗಳ ನಿಯೋಜನೆಗೆ ಸಂಬಂಧಿಸಿದಂತೆ ದೂರವಾಣಿ ಸಂಖ್ಯೆ: 080-22288824, ಮೊಬೈಲ್ ಸಂಖ್ಯೆ: 9845268668, ಇಲ್ಲವೆ ಇಮೇಲ್: deputyceo3.karnataka@gmail.com ಮೂಲಕ ಸಂಪರ್ಕಿಸಬಹುದು.

ವಿ.ಎಸ್.ವಸ್ತ್ರದ್: ಹಿರಿಯ ಸಮಾಲೋಚಕರು, 2ನೆ ಮಹಡಿ, ‘ಬಿ’ ಬ್ಲಾಕ್, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು-560001, ಇವರನ್ನು ತರಬೇತಿ, ಸ್ವೀಪ್‌ನ ಕ್ರಿಯಾಯೋಜನೆ, ಸ್ವೀಪ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಾಹಿತಿಗಳ ಕ್ರೋಢಿಕರಣ, ಸಂಯೋಜನೆ ಹಾಗೂ ದಾಖಲೀಕರಣ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ದೂರವಾಣಿ ಸಂಖ್ಯೆ: 080-22288833, ಮೊಬೈಲ್ ಸಂಖ್ಯೆ :9448439887, ಇಲ್ಲವೇ ಇಮೇಲ್: consveep@gmail.com ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News