ಕೇಂದ್ರ ಸರಕಾರದ ಕೆಲಸದಾಳುವಿನಂತೆ ವರ್ತಿಸುತ್ತಿರುವ ತಮಿಳುನಾಡು ಸರಕಾರ

Update: 2018-04-04 15:27 GMT

ತಿರುಚಿರಾಪಲ್ಲಿ, ಎ. 4: ಕಾವೇರಿ ವಿವಾದ ಕುರಿತಂತೆ ರಾಜ್ಯಗಳ ಹಕ್ಕುಗಳನ್ನು ಎತ್ತಿ ಹಿಡಿಯುವುದಕ್ಕೆ ಬದಲಾಗಿ ತಮಿಳುನಾಡು ಸರಕಾರ ಕೇಂದ್ರದ ಕೆಲಸದಾಳುವಂತೆ ವರ್ತಿಸುತ್ತಿದೆ ಎಂದು ಮಕ್ಕಳ್ ನೀತಿ ಮಯ್ಯಂನ ಅಧ್ಯಕ್ಷ ಕಮಲ್ ಹಾಸನ್ ಬುಧವಾರ ಆರೋಪಿಸಿದ್ದಾರೆ.

  ಕಾವೇರಿ ನಿರ್ವಹಣಾ ಮಂಡಳಿಯನ್ನು ಕೂಡಲೇ ರೂಪಿಸುವಂತೆ ಆಗ್ರಹಿಸಿ ಎಐಎಡಿಎಂಕೆ ನಡೆಸುತ್ತಿರುವ ಒಂದು ದಿನದ ಉಪವಾಸ ಸತ್ಯಾಗ್ರಹ ಕೇವಲ ‘ಪ್ರಹಸನ’ ಎಂದು ಕಮಲ್ ಹಾಸನ್ ಅವರು ಹೇಳಿದ್ದಾರೆ.

ರಾಜ್ಯ ಸರಕಾರ ಕೇಂದ್ರ ಸರಕಾರದ ಕೆಲಸದಾಳುವಿನಂತೆ ವರ್ತಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ರೂಪಿಸುವುದು ಕೇಂದ್ರದ ಜವಾಬ್ದಾರಿ. ಆದರೆ, ಗಡುವಿನ ಬಳಿಕ ಕೇವಲ ನ್ಯಾಯಾಂಗ ಉಲ್ಲಂಘನೆ ಅರ್ಜಿ ಸಲ್ಲಿಸುವ ಮೂಲಕ ಹಾಗೂ ಒಂದು ದಿನದ ಉಪವಾಸ ಸತ್ಯಾಗ್ರಹದ ‘ಪ್ರಹಸನ’ ಮಾಡುವ ಮೂಲಕ ಚುನಾಯಿಸಿದ ಮತದಾರರಿಗೆ ಸಂಬಂಧಿಸಿದ ಕರ್ತವ್ಯಗಳನ್ನು ಪೂರೈಸಿದ್ದೇವೆ ಎಂಬ ಭ್ರಮೆಯಲ್ಲಿ ರಾಜ್ಯ ಸರಕಾರ ತೇಲಬಾರದು ಎಂದು ಅವರು ಕಮಲ್ ಹಾಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News