ಹೌದಿ ಬಂಡುಕೋರರಿಂದ ಸೌದಿ ತೈಲ ಟ್ಯಾಂಕರ್ ಮೇಲೆ ದಾಳಿ

Update: 2018-04-04 17:00 GMT

ಜಿದ್ದಾ, ಎ. 4: ಯಮನ್‌ನ ಹೌದಿ ಬಂಡುಕೋರರು ಮಂಗಳವಾರ ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಸೌದಿ ಅರೇಬಿಯದ ತೈಲ ಟ್ಯಾಂಕರೊಂದರ ಮೇಲೆ ದಾಳಿ ನಡೆಸಿದ್ದಾರೆ.

ಇದು ಜಗತ್ತಿನ ಅತ್ಯಂತ ನಿಬಿಡ ಸಾಗರ ಮಾರ್ಗದಲ್ಲಿನ ನೌಕಾಯಾನಕ್ಕೆ ತೀವ್ರ ಬೆದರಿಕೆಯಾಗಿದೆ.

ಇರಾನ್ ಬೆಂಬಲಿತ ಹೌದಿ ಬಂಡುಕೋರರ ನಿಯಂತ್ರಣದಲ್ಲಿರುವ ಹೊಡೈಡಾ ಬಂದರಿನ ಪಶ್ಚಿಮಕ್ಕೆ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಮಂಗಳವಾರ ಅಪರಾಹ್ನ ಈ ದಾಳಿ ನಡೆದಿದೆ ಎಂದು ಸೌದಿ ನೇತೃತ್ವದ ಮೈತ್ರಿಕೂಟದ ವಕ್ತಾರ ಕರ್ನಲ್ ತುರ್ಕಿ ಅಲ್-ಮಾಲಿಕಿ ತಿಳಿಸಿದರು.

ಮೈತ್ರಿಕೂಟದ ಯುದ್ಧನೌಕೆಯೊಂದು ತಕ್ಷಣ ಧಾವಿಸಿ ದಾಳಿಯನ್ನು ವಿಫಲಗೊಳಿಸಿತು ಎಂದು ಹೇಳಿಕೆ ತಿಳಿಸಿದೆ.

ಟ್ಯಾಂಕರ್‌ಗೆ ಅಲ್ಪಸ್ವಲ್ಪ ಹಾನಿಯಾಗಿದೆ ಹಾಗೂ ಅದು ತನ್ನ ಪ್ರಯಾಣವನ್ನು ಮುಂದುವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News