ಇಂಗ್ಲೆಂಡ್‌ಗೆ ಆಹ್ವಾನ ನೀಡಿದ ಪಾಕಿಸ್ತಾನ

Update: 2018-04-04 18:42 GMT

ಕರಾಚಿ,ಎ.4: ವೆಸ್ಟ್‌ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಯಶಸ್ವಿಯಾಗಿ ಸಂಘಟಿಸಿ ಭದ್ರತೆೆಯ ವಿಚಾರದಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಪಾಕಿಸ್ತಾನ ತಂಡ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ತನ್ನ ದೇಶಕ್ಕೆ ಆಹ್ವಾನಿಸಿದೆ. ಇಂಗ್ಲೆಂಡ್ 2005ರಲ್ಲಿ ಕೊನೆಯ ಬಾರಿ ಪಾಕ್‌ಗೆ ಪ್ರವಾಸ ಕೈಗೊಂಡಿತ್ತು. ಇದೀಗ 13 ವರ್ಷಗಳ ಬಳಿಕ ಪ್ರವಾಸ ಕೈಗೊಳ್ಳಲು ಪಾಕ್‌ನ ಆಂತರಿಕ ಸಚಿವರು ಆಹ್ವಾನ ನೀಡಿದ್ದಾರೆ. ಟೆಸ್ಟ್ ಆಡುವ ಪ್ರಮುಖ ಇಂಗ್ಲೆಂಡ್ ತಂಡ ಪಾಕ್‌ಗೆ ಪ್ರವಾಸ ಕೈಗೊಳ್ಳುವುದು ಅತ್ಯಂತ ಮುಖ್ಯ. ಕ್ರಿಕೆಟ್ ಹಾಗೂ ಪಾಕ್‌ನ ಪ್ರಬಲ ಭದ್ರತೆಯ ವಿಷಯದಲ್ಲಿ ಇದು ಮುಖ್ಯ. ‘‘ಪಾಕಿಸ್ತಾನದಲ್ಲಿ ಯಶಸ್ವಿಯಾಗಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಿರುವುದು ಭಯೋತ್ಪಾದಕತೆ ವಿರುದ್ಧ ಜಯ ಸಾಧಿಸಿರುವ ಸ್ಪಷ್ಟ ಸಾಕ್ಷಿಯಾಗಿದೆ’’ ಎಂದು ಸಚಿವ ಅಹ್ಸನ್ ಇಕ್ಬಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News