ಸೌದಿಯತ್ತ ಮತ್ತೆ ಕ್ಷಿಪಣಿ ಹಾರಿಸಿದ ಹೌದಿ ಬಂಡುಕೋರರು

Update: 2018-04-05 17:17 GMT
ಸಾಂದರ್ಭಿಕ ಚಿತ್ರ

ರಿಯಾದ್, ಎ. 5: ಯಮನ್‌ನ ಹೌದಿ ಬಂಡುಕೋರರು ಬುಧವಾರ ರಾತ್ರಿ ಸೌದಿ ಅರೇಬಿಯದ ಜಿಝನ್ ಪ್ರಾಂತದತ್ತ ಕ್ಷಿಪಣಿಯೊಂದನ್ನು ಉಡಾಯಿಸಿದ್ದಾರೆ ಎಂದು ಅರಬ್ ಮೈತ್ರಿಕೂಟವು ಹೇಳಿಕೆಯೊಂದರಲ್ಲಿ ತಿಳಿಸಿದೆ.

 ಸೌದಿ ಅರೇಬಿಯದ ವಾಯು ರಕ್ಷಣಾ ಘಟಕಗಳು ಕ್ಷಿಪಣಿಯನ್ನು ಪ್ರಾಂತದ ಆಕಾಶದಲ್ಲಿ ತುಂಡರಿಸಿದವು ಎಂದು ಸೌದಿ ಅರೇಬಿಯದ ಅಧಿಕೃತ ಟಿವಿ ಚಾನೆಲ್ ‘ಅಲ್-ಅಕ್ಬರಿಯ’ ವರದಿ ಮಾಡಿದೆ.

ದಾಳಿಯಲ್ಲಿ ಯಾವುದೇ ಸಾವು-ನೋವು ಅಥವಾ ಹಾನಿ ಉಂಟಾಗಿಲ್ಲ ಎಂದು ಮೈತ್ರಿಪಡೆಯ ವಕ್ತಾರ ಕರ್ನಲ್ ತುರ್ಕಿ ಅಲ್-ಮಾಲಿಕಿ ಹೇಳಿದರು.

ಹೌದಿಗಳಿಗೆ ಇರಾನ್ ಸರಕಾರ ಬೆಂಬಲ ನೀಡುವುದನ್ನು ಮುಂದುವರಿಸಿದೆ ಎನ್ನುವುದನ್ನು ಈ ಘಟನೆ ಸ್ಪಷ್ಟಪಡಿಸಿದೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News