ಸರಳವಾಸ್ತು ನಂಬಿ ಬೇಸ್ತು ಬಿದ್ದವರೇ ಜಾಸ್ತಿ !

Update: 2018-04-07 15:55 GMT

►ವಾಸ್ತು ಸಾಮಗ್ರಿಗಳನ್ನು ಖರೀದಿಸಿದವರಿಗೆ ಬಿಲ್ ನೀಡದ ಸರಳವಾಸ್ತು

►ಸಮಸ್ಯೆ ಪರಿಹಾರವಾಗದಿದ್ದರೂ ಹಣ ಹಿಂದಿರುಗಿಸಿಲ್ಲ

ಮಂಗಳೂರು: ಸರಳವಾಸ್ತು ಮಾಡಿಸಿದ ಎಂಟು ತಿಂಗಳಲ್ಲಿ ನೀವು ಮನೆಕಟ್ಟುವವರಿದ್ದರೆ ಮನೆ ಪೂರ್ಣಗೊಳ್ಳುತ್ತದೆ, ಮದುವೆ ಆಗದಿದ್ದವರ ಮನೆಯಲ್ಲಿ ಮದುವೆ ಆಗುತ್ತದೆ, ಉದ್ಯೋಗ ದೊರೆಯದಿದ್ದರೆ ಉದ್ಯೋಗ ದೊರೆಯುತ್ತದೆ, ಆರೋಗ್ಯ ಸಮಸ್ಯೆ ಇದ್ದರೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಮಾಧ್ಯಮದಲ್ಲಿ ಹೇಳುವುದನ್ನು ಕೇಳಿ ನಾವು ಸರಳವಾಸ್ತು ಮಾಡಿಸಿ ಮೋಸ ಹೋಗಿದ್ದೇವೆ ಎಂದು ಬೆಂಗಳೂರಿನ ಮೂರ್ತಿ ನಗರದ ನಿವಾಸಿ ಸರಳಾವತಿ ಆರೋಪಿಸುತ್ತಿದ್ದಾರೆ.

ವಾರ್ತಾಭಾರತಿ ಪತ್ರಿಕೆ ದೂರವಾಣಿ ಮೂಲಕ ಸರಳಾವತಿ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ ಮಾತುಗಳಿವು. ಸರಳವಾಸ್ತು ಮಾಡಿಸಿದ ಮೇಲೆ ನೀವು ಅಂದುಕೊಂಡಿದ್ದೆ ಕೆಲಸ ಸುಲಭವಾಗಿ ಈಡೇರುತ್ತದೆ ಎಂದು ಸರಳವಾಸ್ತು ತಜ್ಞರು ನಮ್ಮ ಮನೆಗೆ ಬಂದಾಗ ಹೇಳಿದ್ದನ್ನು ನಾವು ನಂಬಿ ಚೆನ್ನಾಗಿ ನಡೆಯುತ್ತಿರುವ ಖಾಸಗಿ ಶಾಲೆಗೆ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ಸುಮಾರು 30 ಸಾವಿರ ರೂ. ಶಾಲೆ, ಮನೆಗೆ ಸರಳವಾಸ್ತು ಮಾಡಿಸಿದೇವು.

ಸರಳವಾಸ್ತು ತಜ್ಞರು ಹೇಳಿದ ಹಾಗೆ ನಡೆದುಕೊಂಡರೂ ನಮಗೆ ವ್ಯವಹಾರದಲ್ಲಿ ಯಾವುದೇ ಲಾಭವಾಗದೆ ಸುಮಾರು 10 ಲಕ್ಷ ರೂ. ಸಾಲ ಮಾಡಿಕೊಂಡಿದ್ದೇವೆ. ಅಲ್ಲದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಸರಳವಾಸ್ತು ಮಾಡಿಸಿದ ಮೇಲೆ ನಮ್ಮ ಪಕ್ಕದ ಮನೆಯವರು ನಾಣು ಹೇಳಿದಂತೆ ಸರಳವ್ಸಾತು ಮಾಡಿಸಿದ್ದರು. ಅವರಿಗೂ ಯಾವುದೇ ಲಾಭವಾಗದೆ. ಅವರು ನಮ್ಮ ಜೊತೆ ಜಗಳವಾಡಿ ಪೊಲೀಸ್ ಠಾಣೆಗೆ ದೂರು ನಿಡಿದ್ದರು ಎಂದು ಸರಳಾವತಿ ಹೇಳಿದ್ದಾರೆ.

ಫೆಂಗ್ ಶೂಯಿ ದಿಕ್ಸೂಚಿ ಚಾರ್ಟ್

ಮಾಧ್ಯಮ ಸರಳವಾಸ್ತು ಜಾಹೀರಾತು ವೀಕ್ಷಿಸಿತ್ತಿರುವಾಗ ಸರಳವಾಸ್ತು ಸಂಸ್ಥೆಯ ವ್ಯಕ್ತಿಗಳೆ ಮಾಧ್ಯಗಳಿಗೆ ಕರೆ ಮಾಡಿ ಸರಳವಾಸ್ತು ಮಾಡಿಸಿದ ಮೇಲೆ ನಮಗೆ ಅಷ್ಟು ಲಾಭವಾಗಿದೆ, ಇಷ್ಟು ಲಾಭವಾಗಿದೆ ಎಂದೆಲ್ಲ ಸುಳ್ಳು ಹೇಳಿ ವೀಕ್ಷಕರನ್ನು ನಂಬಿಸಿ ವಂಚನೆ ಮಾಡುತ್ತಾರೆ.

ಇಷ್ಟೆಲ್ಲ ಸಾರ್ವಜನಿಕರಿಗೆ ಮೋಸ ಮಾಡುವ ಸರಳವಾಸ್ತು ತಜ್ಞರು ಎಂದು ಕರೆಸಿಕೊಳ್ಳುವವರ ಪೊಲೀಸರು ಮೇಲೆ ಏಕೆ ದೂರು ದಾಖಲಿಸಿಲ್ಲ ? ನಮಗೆ ಆರೋಗ್ಯ ಸಮಸ್ಯೆ ಕಾಡುತ್ತಿರುವುದರಿಂದ ನಾವು ದೂರು ಕೊಟ್ಟಿಲ್ಲ. ಇನ್ನು ಸರಳವಾಸ್ತುಗೆ ಕರೆಮಾಡಿ ನಮ್ಮ ಹಣವನ್ನು ವಾಪಾಸ್ ಕೇಳಿದರೆ. ನೀವು ನಾವು ಹೇಳಿದಂತೆ ಮಾಡಿಲ್ಲ ಎಂದು ಹಾರಿಕೆ ಉತ್ತರ ನೀಡಿ ಪೋನ್ ಕಟ್ ಮಾಡುತ್ತಾರೆ ಎಂದು ಸರಳಾವತಿ ದೂರಿದ್ದಾರೆ.

ಸರಳವಾಸ್ತು ಹಾಗೂ ಫೆಂಗ್ ಶೂಯಿ ಅದೃಷ್ಟ ಸಂಖ್ಯೆ ಒಂದೆ ಆಗಿರುತ್ತದೆ. ಆದರೆ, ಸರಳವಾಸ್ತು ತಜ್ಞರು ಸಾರ್ವಜನಿಕರಿಗೆ ಸ್ವಲ್ಪ ಗೊಂದಲ ಮೂಡಿಸಲು 0-5 ಸಂಖ್ಯೆಯನ್ನು ಯಾವ ಗ್ರಾಹಕರಿಗೂ ಇದುವರೆಗೂ ಹೆಳಿಲ್ಲ.

ಜನ್ಮ ದಿನಾಂಕದಲ್ಲಿ ಲಕ್ಕಿ ನಂಬರ ಹೇಗೆ ತೆಗೆಯುತ್ತಾರೆ ?

ಸರಳವಾಸ್ತು ಲಕ್ಕಿ ನಂಬರ್ ಕ್ಯಾಲೆಂಡರ್ ನಲ್ಲಿ ಗ್ರಾಹಕರಿಗೆ ಫೆಂಗ್ ಶೂಯಿ ಮತ್ತು ಸರಳವಾಸ್ತು ಒಂದೆ ಎಂದು ಗೊತ್ತಾಗಭಾರದೆಂದು ವರ್ಷದ ಆರಂಭದ ಮತ್ತು ಅಂತ್ಯದ ದಿನದಲ್ಲಿ 10-15 ದಿನ ಹಿಂದೆ ಮುಂದೆ ಮಾಡಿದ್ದಾರೆ. ಅದರಲ್ಲಿ 15-06-1967 ರಂದು ಜನಿಸಿದ ವ್ಯಕ್ತಿಯ ಅದೃಷ್ಟ ಸಂಖ್ಯೆ ಕಂಡುಹಿಡಿಯೊಣ. 04/02/1967 ಸಂಜೆ 08:31 ರಿಂದ 05/02/1968 ಮಧ್ಯಾಹ್ನ 02:07 ಸಮಯದಲ್ಲಿ ಜನಿಸಿದ ಪುರುಷರ ಅದೃಷ್ಟ ಸಂಖ್ಯೆ 6 ಹಾಗೂ ಮಹಿಳೆಯರ ಅದೃಷ್ಟ ಸಂಖ್ಯೆ 9 ಬರುತ್ತದೆ. ಗುಣಿಸುವ ವಿಧಾನ (1967= 1+9=10, 6+7=13, 1+3=4, 10-4 ಪುರುಷನ ಅದೃಷ್ಟ ಸಂಖ್ಯೆ 6, 1967=1+9=10-5=5, 6+7=13, 1+3=4, 4+5=9 ಮಹಿಳೆಯ ಅದೃಷ್ಟ ಸಂಖ್ಯೆ ಬರುತ್ತದೆ. ) ಫೆಂಗ್ ಶೂಯಿ ಕ್ಯಾಲೆಂಡರ್‌ನ ಆರಂಭದ ದಿನ ಹಾಗೂ ಅಂತಿಮ ದಿನವನ್ನು ಸರಿಯಾಗಿ ಗುರುತಿಸಿ ಅದೃಷ್ಟ ಸಂಖ್ಯೆ ತೆಗೆಯುತ್ತಾರೆ. ಅದೃಷ್ಟ ಸಂಖ್ಯೆ ಯಲ್ಲಿ 1,2,3,4,6,7,8,9 ಮಾತ್ರ ಬರುತ್ತದೆ ಅದಕ್ಕೆ ತಕ್ಕಂತೆ ದಿಕ್ಕುಗಳನ್ನು ಸೂಚಿಸುತ್ತಾರೆ.

ಎಂಟು ತಿಂಗಳಲ್ಲಿ ಸಮಸ್ಯೆ ಪರಿಹಾರವಾಗದಿದ್ದರೆ ಹಣ ವಾಪಸ್: ಎಂಟು ತಿಂಗಳಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ವಾಗದಿದ್ದರೆ ನಿಮ್ಮ ಹಣ ಹಿಂದಿರುಗಿಸುತ್ತೇವೆ ಎಂದು ಟಿವಿ ಮಾಧ್ಯಮದ ಜಾಹೀರಾತಿನಲ್ಲಿ ಹೇಳುವ ಸರಳವಾಸ್ತು ತಜ್ಞರು ಮೋಸಹೋದ ಶೇ. 90ರಷ್ಟು ಜನರಿಗೆ ಹಣವನ್ನು ಹಿಂದಿರುಗಿಸಿಲ್ಲ. ಶೇ. 10 ರಷ್ಟು ಪ್ರಭಾವಿ ಜನ ಮಾತ್ರ ನಾವು ಪೊಲೀಸರಿಗೆ ದೂರನ್ನು ನೀಡುತ್ತೇವೆ ಎಂದು ಕರೆಯನ್ನು ನೀಡಿದಾಗ ಅಷ್ಟೊ ಇಷ್ಟೊ ಹಣವನ್ನು ನೀಡಿದ್ದಾರೆ. ಇನ್ನು ಕೆಲವರು ತಮ್ಮ ನೋವನ್ನು ಯಾರಿಗೂ ಹೇಳಿಕೊಳ್ಳಲಾಗದೆ. ಸುಮ್ಮನೆ ಇದ್ದು ಬಿಡುತ್ತಾರೆ. ಇಂತಹ ಸಂಸ್ಥೆಗಳು ರಾಜಾರೋಷವಾಗಿ ಸಾರ್ವಜನಿಕರಿಂದ ಹಣವನ್ನು ದೋಚುವ ಕಾರ್ಯಮಾಡುತ್ತಿವೆ ಎನ್ನುವುದು ಮೋಸ ಹೋದವರ ಆರೋಪವಾಗಿದೆ.

ಹಣಕ್ಕೆ ರಶೀದಿ ನೀಡದ ಸರಳವಾಸ್ತು ತಜ್ಞರು: ಒಬ್ಬ ವ್ಯಕ್ತಿ ಸರಳವಾಸ್ತು ಸಾಮಗ್ರಿಗಳನ್ನು ಖರೀದಿಸಿದರೆ ಅದಕ್ಕೆ ಯಾವುದೇ ರಶೀದಿ ನೀಡುವುದಿಲ್ಲ. ಅಲ್ಪಪ್ರಮಾಣದ ತೆರಿಗೆ ನೀಡಿ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸುವ ಇವರು ಸರಕಾರಕ್ಕೂ ವಂಚನೆ ಮಾಡುತ್ತಿದ್ದಾರೆ ಎಂದು ಕೆಲವು ಸರಳವಾಸ್ತು ಮಾಡಿಸಿದ ವ್ಯಕ್ತಿಗಳ ಆರೋಪವಾಗಿದೆ.

ಸರಳ ವಾಸ್ತು ಎಂಬುದು ಕೇವಲ ಮೂಢನಂಬಿಕೆ: ಮನೆ ಕಟ್ಟುವಾಗ ವ್ಯವಸ್ಥಿತವಾಗಿ ಕಟ್ಟಿಕೊಳ್ಳಬೇಕೆಂಬ ವಿಚಾರದೊಂದಿಗೆ ವಾಸ್ತು ಶಾಸ್ತ್ರ ಅಸ್ತಿತ್ವಕ್ಕೆ ಬಂತು. ನೆನಪಿಡಿ ವಾಸ್ತು ಪ್ರಕಾರ ಮನೆ ಕಟ್ಟದೆ ಇದ್ದರೆ ಅಲ್ಲಿ ಇರುವವರಿಗೆ ತೊಂದರೆ ಬರುತ್ತದೆ ಎನ್ನುವುದೆಲ್ಲಾ ಹಣ ಮಾಡುವ ತಂತ್ರವೇ ಹೊರತು ಬೇರೆನಲ್ಲ. ಆ ರೀತಿ ವಾಸ್ತುವಿನ ನಿಯಮಗಳನ್ನು ಸರಿಯಾಗಿ ಅನುಸರಿಸದೆ ಮನೆ ಕಟ್ಟುವವರಿಗೆ ಹೆಚ್ಚೆಂದರೆ ಮನೆ ಸುಂದರವಾಗಿ ಕಾಣದೆ ಹೋಗಬಹುದು ಅಷ್ಟೆ. ಸರಳವಾಸ್ತು ಎಂಬುದು ಮೂಢನಂಬಿಕೆಯಾಗಿದೆ.

ಸರಳವಾಸ್ತುವಿನವರು ಹೇಳುವ ಸಮಸ್ಯೆಗಳು

ಉದ್ಯೋಗದಲ್ಲಿ ಪ್ರಗತಿ ಇಲ್ಲ. ಪ್ರಮೋಷನ್ ಸಿಗುತ್ತಿಲ್ಲ. ಅರ್ಹತೆಗೆ ತಕ್ಕ ಉದ್ಯೋಗ ಸಿಗುತ್ತಿಲ್ಲ. ಮದುವೆ ಆಗುತ್ತಿಲ್ಲ. ಮನೆಯಲ್ಲಿ ಹಾಗೂ ಹೊರಗಡೆ ಸಂಬಂಧಗಳಲ್ಲಿ ತೊಂದರೆ ಇದೆ. ಆರೋಗ್ಯ ಸಮಸ್ಯೆ ಬರುತ್ತದೆ. ಶಸ್ತ್ರಚಿಕಿತ್ಸೆ ನಡೆಯುತ್ತದೆ. ಹಣಕಾಸಿನಲ್ಲಿ ನಷ್ಟ ಆಗುತ್ತಿದೆ. ದುಡಿದ ಹಣ ಉಳಿಯುತ್ತಿಲ್ಲ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಪ್ರಗತಿ ಇಲ್ಲ. ಕಡಿಮೆ ಅಂಕ ಬರುತ್ತದೆ. ವಿನಾಕಾರಣವಾಗಿ ಹೆಸರು ಕೆಡುತ್ತದೆ. ಮಕ್ಕಳಾಗುವುದರಲ್ಲಿ ತೊಂದರೆ ಇದೆ. ನಿಮಗೆ ಕಷ್ಟದ ಸಮಯದಲ್ಲಿ ಯಾರೂ ಸಹಾಯಕ್ಕೆ ಬರುತ್ತಿಲ್ಲ. ನಿಮ್ಮ ಸ್ವತ್ತು ಕಳವು ಹಾಗೂ ಅಗ್ನಿಗೆ ಆಹುತಿಯಾಗುವ ಸಾಧ್ಯತೆ ಇದೆ.

ಸರಳವಾಸ್ತು ಮಾಡಿಸಿದ ಮೇಲೆ 10 ಲಕ್ಷ ರೂ. ನಷ್ಟವಾಗಿದೆ. ಸರಳವಾಸ್ತು ನಂಬಿ ನಾವು ಖಾಸಗಿ ಶಾಲೆ ಅಭಿವೃದ್ಧಿಗೊಳ್ಳುತ್ತದೆ ಎಂದು ವಾಸ್ತು ಮಾಡಿಸಿದರೆ. ಯಾವುದೇ ಲಾಭವಾಗದೇ ಶಾಲೆಯನ್ನು ಮುಚ್ಚುವ ಹಂತಕ್ಕೆ ಬಂದಿದ್ದೇವೆ. ಅಲ್ಲದೇ, ಆರೋಗ್ಯದಲ್ಲಿ ಸಮಸ್ಯೆಯಾಗಿದೆ. ಸುಮಾರು 30 ಸಾವಿರ ಖರ್ಚು ಮಾಡಿ ಮನೆ, ಶಾಲೆಗೆ ಸರಳವಾಸ್ತು ಮಾಡಿಸಿದ್ದೇವು. ಅಷ್ಟೆ ಅಲ್ಲದೇ ಮಾಧ್ಯಮದಲ್ಲಿ ಸರಳವಾಸ್ತುವಿನಿಂದ ಲಾಭವಾಗಿದೆ ಎಂಬ ಜಾಹೀರಾತು ನೋಡಿ ನಮ್ಮ ನಗರದಲ್ಲಿ ಸುಮಾರು ಜನರು ಸರಳವಾಸ್ತು ಮಾಡಿಸಿದ್ದಾರೆ. ಅವರಿಗೂ ಯಾವುದೇ ಲಾಭವಾಗಿಲ್ಲ.

ಸರಳಾವತಿ, ಬೆಂಗಳೂರು, ಸರಳವಾಸ್ತುವಿನಿಂದ ಮೊಸ ಹೋದವರು.

Writer - ಕೆ.ಎಮ್. ಪಾಟೀಲ್

contributor

Editor - ಕೆ.ಎಮ್. ಪಾಟೀಲ್

contributor

Similar News