×
Ad

ಮದ್ಯ ಸೇವಿಸಿ ಹಲ್ಲೆ ನಡೆಸಿದ ನಟ ಜಗ್ಗೇಶ್: ಆರೋಪ

Update: 2018-04-07 19:26 IST

ಬೆಂಗಳೂರು, ಎ.7: ರಸ್ತೆಬದಿ ಅಂಗಡಿಯೊಂದರ ವಿಚಾರಕ್ಕೆ ಸಂಬಂಧಪಟ್ಟಂತೆ ನಟ, ಬಿಜೆಪಿ ಮುಖಂಡ ಜಗ್ಗೇಶ್ ಮದ್ಯ ಸೇವಿಸಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರವಿಕುಮಾರ್ ಎಂಬವರು ಗಂಭೀರ ಆರೋಪ ಮಾಡಿದ್ದಾರೆ.

ಮಾದೇಗೌಡ ಎಂಬವರು ನಗರದ ಮಲ್ಲೇಶ್ವರಂನ 8ನೇ ಕ್ರಾಸ್‌ನಲ್ಲಿ ರಸ್ತೆಬದಿ ಅಂಗಡಿಯೊಂದನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ, ಶುಕ್ರವಾರ ಏಕಾಏಕಿ ಜಗ್ಗೇಶ್ ಹಾಗೂ ಎಂಟು ಮಂದಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಈ ವೇಳೆ ಜಗ್ಗೇಶ್ ಮದ್ಯ ಸೇವಿಸಿದ್ದರು ಎಂದು ರವಿಕುಮಾರ್ ಆರೋಪಿಸಿದ್ದಾರೆ.

ಹಲ್ಲೆ ಸಂಬಂಧ ಪೊಲೀಸ್ ಠಾಣೆಗೆ ಜಗ್ಗೇಶ್ ವಿರುದ್ಧ ದೂರು ನೀಡಲು ಮುಂದಾದರೂ, ಪೊಲೀಸರು ದೂರು ಸ್ವೀಕರಿಸಿಲ್ಲ. ಬಳಿಕ, ಬಿಬಿಎಂಪಿ ಸದಸ್ಯ ಮಂಜುನಾಥ್ ಸೇರಿ ಪ್ರಮುಖರು ಘಟನೆ ಬಗ್ಗೆ ರಾಜಿ ಮಾಡಲು ಯತ್ನಿಸಿದ್ದಾರೆ. ಆದರೆ, ಮಾದೇಗೌಡನ ಸಂಬಂಧಿಕರಾದ ನಟ ಜಗ್ಗೇಶ್ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸ್ಪಷ್ಟನೆ: ನಡೆದ ಘಟನೆಯನ್ನು ಪರಾಮರ್ಶಿಸದೆಯೇ ನನ್ನ ಬಗ್ಗೆ ತಪ್ಪುಸಂದೇಶ ಸಾರುವ ಹೇಳಿಕೆಯೊಂದಿಗೆ ವೀಡಿಯೊ ನೀಡಿರುವವರ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಿ ಕಾನೂನಾತ್ಮಕವಾಗಿ ಉತ್ತರಿಸುತ್ತೇನೆ ಎಂದು ಜಗ್ಗೇಶ್ ಹೇಳಿದ್ದಾರೆ.

‘ಪರಿಸ್ಥಿತಿ ಇರಲಿಲ್ಲ’
ಬಿಜೆಪಿ ಮುಖಂಡ ಜಗ್ಗೇಶ್ ಮದ್ಯದ ಅಮಲಿನಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅವರಿಗೆ ಸ್ಥಳೀಯ ಮುಖಂಡರು ನಿಯಂತ್ರಿಸಿದರು ಕೇಳುವ ಪರಿಸ್ಥಿತಿ ಇರಲಿಲ್ಲ’
-ರವಿಕುಮಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News