×
Ad

ಎ.12 ರಂದು ಬಿಜೆಪಿ ಸಂಸದರ ಉಪವಾಸ ಸತ್ಯಾಗ್ರಹ: ಕೇಂದ್ರ ಸಚಿವ ಅನಂತಕುಮಾರ್

Update: 2018-04-07 20:24 IST

ಬೆಂಗಳೂರು, ಎ. 7: ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ಖಂಡಿಸಿ ಬಿಜೆಪಿ ಮತ್ತು ಎನ್‌ಡಿಎ ಸಂಸದರು ಎ.12ರಂದು ದೇಶಾದ್ಯಂತ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ್ ತಿಳಿಸಿದ್ದಾರೆ.

ಶನಿವಾರ ಬೆಂಗಳೂರು ಹೊರವಲಯದಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ ಅಧಿವೇಶನ ಕಲಾಪ ಹದಗೆಡಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಅಸಹಿಷ್ಣುತೆಯೇ ಕಾರಣ ಎಂದು ಟೀಕಿಸಿದರು.

ಸಂಸದರಿಂದ ಹಳ್ಳಿ ಭೇಟಿ: ಎ.14ರಿಂದ ಮೇ 5ರ ವರೆಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಬಿಜೆಪಿಯ ಎಲ್ಲ ಶಾಸಕರು, ಸಂಸದರು ಹಳ್ಳಿಗಳಿಗೆ ಭೇಟಿ ನೀಡಿ ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆಂದು ತಿಳಿಸಿದರು.

23 ದಿನಗಳ ಕಾಲ ಅಧಿವೇಶನ ಕಲಾಪ ವ್ಯರ್ಥವಾಗಿದೆ. ಸಂಸದರಾದ ನಾವು ಪಡೆಯುವ ವೇತನ, ಭತ್ತೆ ಎಲ್ಲ ಜನರ ತೆರಿಗೆ ಹಣ. ಆದರೆ, ಕಾಂಗ್ರೆಸ್ ಕಲಾಪ ನಡೆಯಲು ಬಿಡಲಿಲ್ಲ. ಹೀಗಾಗಿ ಕೆಲಸವಿಲ್ಲದೆ, ಭತ್ಯೆಯೂ ಇಲ್ಲ ಎಂಬ ತತ್ವದಡಿ ಭತ್ಯೆ ಪಡೆದಿಲ್ಲ ಎಂದರು.

ಮಾತೆ ಮಾಹಾದೇವಿ ಗಡುವಿಗೆ ಮಹತ್ವ ಇಲ್ಲ

‘ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಸಂಬಂಧ ಎ.18ರೊಳಗೆ ಕೇಂದ್ರ ಸರಕಾರ ತನ್ನ ನಿಲುವು ಪ್ರಕಟಿಸಬೇಕೆಂಬ ಮಾತೆ ಮಹಾದೇವಿ ನೇತೃತ್ವದ ಮಠಾಧೀಶರ ಗಡುವಿಗೆ ಯಾವುದೇ ಮಹತ್ವವಿಲ್ಲ. ಈ ಹಿಂದೆ ಯುಪಿಎ ಸರಕಾರವೇ ಪ್ರತ್ಯೇಕ ಧರ್ಮದ ಪ್ರಸ್ತಾವವನ್ನು ತಿರಸ್ಕರಿಸಿದೆ’
-ಅನಂತಕುಮಾರ್ ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News