ಚುನಾವಣಾ ನೀತಿ ಸಂಹಿತೆ: 3.33 ಕೋಟಿ ರೂ.ನಗದು ವಶ; ಸಂಜೀವ್‌ಕುಮಾರ್
Update: 2018-04-07 20:47 IST
ಬೆಂಗಳೂರು, ಎ. 7: ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.33 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ನಗದು, ಮದ್ಯ, ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಫ್ಲೈಯಿಂಗ್ ಸ್ಕ್ವಾಡ್ ತಂಡ 24 ಗಂಟೆಗಳಲ್ಲಿ 4.85 ಲಕ್ಷ ರೂ.ನಗದು, ಮದ್ಯ, 2 ವಾಹನಗಳು, 30 ಸಾವಿರ ರೂ.ಮೌಲ್ಯದ 198 ದೋಸೆ ತವಾಗಳು, 2ಲಕ್ಷ ರೂ. ಮೊತ್ತದ ಅಡುಗೆ ಪಾತ್ರೆ, ಶಾಮಿಯಾನ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.