×
Ad

ಎಸೆಸೆಲ್ಸಿ ಮಾದರಿ ಉತ್ತರ ಪತ್ರಿಕೆ ಪ್ರಕಟ

Update: 2018-04-07 20:57 IST

ಬೆಂಗಳೂರು, ಎ.7: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಮಾದರಿ ಉತ್ತರ ಪತ್ರಿಕೆಗಳನ್ನು ಹಾಗೂ Scheme of Evaluation ಕುರಿತು ಇಲಾಖೆಯ ವೆಬ್‌ಸೈಟ್ www.kseeb.kar.nic.in ನಲ್ಲಿ ಪ್ರಕಟಿಸಿದ್ದು, ವಿದ್ಯಾರ್ಥಿಗಳು ಮೂರು ದಿನಗಳೊಳಗೆ ಆನ್‌ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಆಕ್ಷೇಪಣೆ ಸಲ್ಲಿಸುವ ವಿದ್ಯಾರ್ಥಿಗಳು ಎ.4 ರಂದು ಪರೀಕ್ಷಾ ಮಂಡಳಿಯ ಸುತ್ತೋಲೆಯ ಅನ್ವಯ (Notification tab) ನೀಡಲಾಗಿರುವ ವಿಧಾನದ ಹಂತಗಳನ್ನು ಅನುಸರಿಸಿ ಆಕ್ಷೇಪಣೆಗಳನ್ನು ಸಲ್ಲಿಸಬೇಕು. ವಿದ್ಯಾರ್ಥಿಗಳು ಆಕ್ಷೇಪಣೆ ಸಲ್ಲಿಸಲು ಎ.8 ರಿಂದ 10ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News