×
Ad

ಆಧುನಿಕ ಜೀವನ ಶೈಲಿ ರೋಗಕ್ಕೆ ಸೋಪಾನ: ಡಾ.ಬಿ.ಎಂ.ಹೆಗಡೆ

Update: 2018-04-07 21:37 IST

ಬೆಂಗಳೂರು, ಎ.7: ಯುವ ಜನತೆ ಆಧುನಿಕ ಜೀವನ ಶೈಲಿಯ ವ್ಯಾಮೋಹಕ್ಕೆ ಒಳಗಾಗಿ ಆರೋಗ್ಯದ ಕುರಿತು ಕಾಳಜಿ ವಹಿಸುತ್ತಿಲ್ಲ. ಇದು ಸರಿಯಾದ ಜೀವನ ಕ್ರಮವಲ್ಲವೆಂದು ಪದ್ಮಭೂಷಣ ಡಾ.ಬಿ.ಎಂ.ಹೆಗಡೆ ಅಭಿಪ್ರಾಯಿಸಿದರು.

ಶನಿವಾರ ನಗರದಲ್ಲಿ ಆರೋಗ್ಯ ತಜ್ಞ ಆನಂದ ಗುರೂಜಿ ಆಯೋಜಿಸಿದ್ದ ಆರೋಗ್ಯ ಕುರಿತ ಸೂಕ್ತ ಸಲಹೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರೋಗ್ಯ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಹತ್ತಲು ಸಾಧ್ಯವೆಂದು ತಿಳಿಸಿದರು.

ಈ ವೇಳೆ ಆನಂದ ಗುರೂಜಿ ಮಾತನಾಡಿ, ದಿನನಿತ್ಯದ ಚಟುವಟಿಕೆಗಳನ್ನು ಸರಿಯಾದ ವೇಳೆಗೆ ಸರಿಯಾದ ಕ್ರಮದಲ್ಲಿ ಮಾಡಿದರೆ ಸಕ್ಕರೆ ಖಾಯಿಲೆ, ರಕ್ತದೊತ್ತಡ ಸೇರಿದಂತೆ ಹಲವು ರೋಗಗಳಿಂದ ಮುಕ್ತರಾಗಬಹುದು. ಈ ನಿಟ್ಟಿನಲ್ಲಿ ಯುವ ಜನತೆ ದಿನನಿತ್ಯದ ಚಟುವಟಿಕೆಗಳನ್ನು ಕಾಳಜಿ ವಹಿಸಿ ನಿರ್ವಹಿಸಬೇಕೆಂದು ತಿಳಿಸಿದರು.

ಜಗತ್ತಿನಾದ್ಯಂತ ಸುಮಾರು 41 ಕೋಟಿ ಮಂದಿ ಮಧುಮೇಹ ರೋಗದಿಂದ ಬಳಲುತ್ತಿದ್ದಾರೆ. ನಮ್ಮ ಜೀವನ ಶೈಲಿಯ ಸಮಸ್ಯೆಯಿಂದಾಗಿ ನಾವಾಗಿಯೆ ರೋಗಗಳನ್ನು ಬರಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ ಪೌಷ್ಟಿಕ ಆಹಾರ ಹಾಗೂ ವ್ಯಾಯಾಮವು ಬದುಕಿನ ಬಹುಮುಖ್ಯ ಭಾಗವಾಗುವ ಮೂಲಕ ರೋಗಗಳನ್ನು ಬರದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News