×
Ad

ಬೆಂಗಳೂರು: ಮೂವರು ಕಳವು ಆರೋಪಿಗಳ ಬಂಧನ; ಲಕ್ಷಾಂತರ ರೂ. ಮೌಲ್ಯದ ವಾಹನಗಳ ವಶ

Update: 2018-04-07 23:11 IST

ಬೆಂಗಳೂರು, ಎ.7: ವಾಹನ ಕಳವು ಪ್ರಕರಣ ಸಂಬಂಧ ಮೂವರನ್ನು ಬಂಧಿಸಿರುವ ಇಲ್ಲಿನ ಕೋಣನಕುಂಟೆ ಠಾಣೆ ಪೊಲೀಸರು, 15 ಲಕ್ಷ ರೂ. ಮೌಲ್ಯದ ಕಾರು, ಎರಡು ಆಟೊ ರಿಕ್ಷಾ ಮತ್ತು 17 ಬೈಕ್‌ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಪ್ರಶಾಂತ್(19), ಪ್ರಮೋದ್(19), ಅಭಿ(22) ಎಂದು ಪೊಲೀಸರು ಗುರುತಿಸಿದ್ದಾರೆ.

ಕೋಣನಕುಂಟೆ ಮತ್ತು ಪುಟ್ಟೇನಹಳ್ಳಿ ವ್ಯಾಪ್ತಿಗಳಲ್ಲಿ ಆಗಿಂದಾಗ್ಗೆ ಪಲ್ಸರ್ ಬೈಕ್‌ಗಳು ಕಳವಾಗುತ್ತಿದ್ದುದ್ದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಬಂಧನದಿಂದ ಕೋಣನಕುಂಟೆ ಠಾಣೆಗೆ ಸಂಬಂಧಿಸಿದಂದು ಕಾರು, ಎರಡು ಆಟೊ ರಿಕ್ಷಾ, ಆರು ಬೈಕ್ ಕಳ್ಳತನ ಮತ್ತು ಪುಟ್ಟೇನಹಳ್ಳಿ ಠಾಣೆಯ ನಾಲ್ಕು ಬೈಕ್ ಕಳವು ಪ್ರಕರಣ, ಮೈಕೋಲೇಔಟ್, ಬ್ಯಾಟರಾಯನಪುರ ಠಾಣೆಯ ಒಂದೊಂದು ಬೈಕ್ ಕಳ್ಳತನ ಪ್ರಕರಣ ಸೇರಿ ಒಟ್ಟು 20 ಪ್ರಕರಣಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News