ಉದ್ಯಮಿ-ವೈದ್ಯನೆಂದು ನಂಬಿಸಿ ವಂಚನೆ : ಆರೋಪಿಯ ದಸ್ತಗಿರಿ

Update: 2018-04-08 12:50 GMT

ಬೆಂಗಳೂರು, ಎ. 8: ತಾನೊಬ್ಬ ಉದ್ಯಮಿ, ವೈದ್ಯನೆಂದು ನಂಬಿಸಿ ಬೆಲೆ ಬಾಳುವ ವಸ್ತುಗಳನ್ನು ದೋಚಿ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಇಲ್ಲಿನ ಆರ್‌ಟಿ ನಗರ ಠಾಣಾ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಕಾಡುಗೊಂಡನಹಳ್ಳಿ ನಿವಾಸಿ ಅಬ್ದುಲ್ ಖಾದರ್ ಯಾನೆ ಡಾ.ಸಲೀಂ (59) ಎಂದು ಗುರುತಿಸಲಾಗಿದೆ.

ಆರೋಪಿಯು ತಾನೊಬ್ಬ ಉದ್ಯಮಿ ಎಂದು ಹೇಳಿಕೊಂಡು ಶಾಲೆಯೊಂದಕ್ಕೆ ತೆರಳಿ ಶಿಕ್ಷಕಿಯರಿಗೆ ಸೀರೆಗಳನ್ನು ಕಾಣಿಕೆಯಾಗಿ ಕೊಡಿಸುವ ನೆಪದಲ್ಲಿ ಪ್ರಾಂಶುಪಾಲರು, ಶಿಕ್ಷಕಿಯರನ್ನು ನಂಬಿಸಿ 1.80ಲಕ್ಷ ರೂ. ಮೊತ್ತದ ಚಿನ್ನಾಭರಣಗಳನ್ನು ಪಡೆದು ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವೈದ್ಯನೆಂದು ನಂಬಿಸಿ ಇಲ್ಲಿನ ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸ್ಕಾನಿಂಗ್ ಸೆಂಟರ್ ಬಳಿ ವೈದ್ಯನಂತೆ ನಡೆಸಿ ರೋಗಿಗಳನ್ನು ನಂಬಿಸಿ ಆಭರಣಗಳನ್ನು ಪಡೆದು ವಂಚನೆ ಮಾಡಿದ್ದ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News