ಜೂಜಾಟ: ಆರು ಮಂದಿಯ ಬಂಧನ
Update: 2018-04-08 22:23 IST
ಬೆಂಗಳೂರು, ಎ. 8: ಹಣವನ್ನು ಪಣಕ್ಕಿಟ್ಟುಕೊಂಡು ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ಇಲ್ಲಿನ ಸಿಸಿಬಿ ಪೊಲೀಸರು ಆರು ಮಂದಿ ಬಂಧಿಸಿದ್ದು, ಆರೋಪಿಗಳಿಂದ 1.78ಲಕ್ಷ ರೂ.ನಗದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಸುನೀಲ್ (28), ಅಕ್ಷಯ್ (23), ಮಂಜುನಾಥ್ ರೆಡ್ಡಿ (35), ರಾಜ (39), ಸುಬ್ರಹ್ಮಣ್ಯ (28) ಹಾಗೂ ವಿಜಯ್(22) ಎಂದು ಗುರುತಿಸಲಾಗಿದೆ. ಆರೋಪಿಗಳು ಇಲ್ಲಿನ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಶಾನಬೋಗ ಲೇಔಟ್‌ನ ಮನೆಯೊಂದರಲ್ಲಿ ಜೂಜಾಟ ಆಡುತ್ತಿದ್ದರು ಎನ್ನಲಾಗಿದೆ.
ಈ ಸಂಬಂಧ ಖಚಿತ ಮಾಹಿತಿ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ ಜೂಜಾಟಕ್ಕೆ ಪಣಕ್ಕಿಟ್ಟಿದ್ದ 1,78,400 ರೂ.ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಇಲ್ಲಿನ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.