ಭಾರತೀಯ ಜನತಾ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಬೆಂಗಳೂರು, ಎ.9: ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ನೇತೃತ್ವದಲ್ಲಿ ಸ್ಥಾಪನೆಗೊಂಡಿರುವ ಭಾರತೀಯ ಜನತಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಹಾಗೂ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ.
ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅನುಪಮಾ ಶೆಣೈ, ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಅಸಾಧ್ಯವಾದ ಮಾತು. ಹೀಗಾಗಿ, ಆರ್‌ಟಿಐ ಕಾಯ್ದೆಯನ್ನು ಮುಂದುವರಿಸಿ ಅದಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲಾಗುತ್ತದೆ. ಭ್ರಷ್ಟರನ್ನು ಹಿಡಿದುಕೊಟ್ಟವರಿಗೆ ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದವನಿಂದ ನೂರು ಪಟ್ಟು ದಂಡ ವಿಧಿಸಿ, ಅದರಲ್ಲಿ ಶೇ.20 ರಷ್ಟು ಹಿಡಿದುಕೊಟ್ಟವರಿಗೆ ನೀಡಲಾಗುತ್ತದೆ. ಪಕ್ಷದಲ್ಲಿ ಹೈ ಕಮಾಂಡ್ ಪದ್ಧತಿ ಬದಲಿಗೆ, ಗ್ರಾಮದ ಯುವ ಸಮುದಾಯವನ್ನ ಜಾಗೃತಿಗೊಳಿಸಿ ಸಂಘಟನೆ ಮಾಡಲಾಗುತ್ತದೆ ಎಂದರು.
ಗ್ರಾಮಕ್ಕೆ ಗ್ರಾಮಸ್ಥರಿಂದ ಅಧ್ಯಕ್ಷರ ಆಯ್ಕೆ ಮಾಡಿ ಉಳಿದ ಸದಸ್ಯರ ಆಯ್ಕೆಯನ್ನು ರದ್ಧು ಮಾಡಲಾಗುತ್ತದೆ. ಮಂತ್ರಿ ಮಂಡಲದಲ್ಲಿ ಶೇ.2 ರಷ್ಟು ಮಂತ್ರಿಗಳಿದ್ದು, ವಿಧಾನಪರಿಷತ್, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಅನ್ನು ರದ್ದು ಮಾಡಲಾಗುತ್ತದೆ. ರಾಜ್ಯದಲ್ಲಿ ಪ್ರತಿ ತಿಂಗಳು ಸಂಗ್ರಹವಾಗುವ ಕರವನ್ನು ಚುನಾಯಿತ ಶಾಸಕರ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಅಲ್ಲಿಂದ ಗ್ರಾಮದ ಅಧ್ಯಕ್ಷರ ಸರಕಾರಿ ಖಾತೆಗೆ ವರ್ಗಾವಣೆ ಮಾಡಿ ಗ್ರಾಮ ಸಭೆ ಮೂಲಕ ಕಾಮಗಾರಿಗಳನ್ನು ಆಯ್ಕೆ ಮಾಡಿ ಪಾರದರ್ಶಕವಾಗಿ ಖರ್ಚು ಮಾಡಲಾಗುತ್ತದೆ ಎಂದು ತಿಳಿಸಿದರು.
ಮೊದಲ ಅಭ್ಯರ್ಥಿಗಳ ಪಟ್ಟಿ: ಅಭಿಷೇಕ್ ಗೌಡ(ಕನಕಪುರ), ಅಶ್ವಿನಿ ದೇಸಾಯಿ(ಬೀಳಗಿ), ಲಕ್ಷ್ಮಿ ರಾಮಯ್ಯ ಶೆಟ್ಟಿ(ಕೆ.ಆರ್.ಪುರ), ರಾಕೇಶ್ ತೇಲಿ(ಬಿಜಾಪುರ), ವಸೀಮ್ ಅಹಮದ್(ಬ್ಯಾಟರಾಯನಪುರ), ಶ್ಯಾಮಸುಂದರ್ ಕುಲಕರ್ಣಿ (ಚಿತ್ರದುರ್ಗ), ಬಸವರಾಜ್ ನಾಲವಾಡದ(ಹುನಗುಂದ), ವೆಂಕಟೇಶ್ ಉಪ್ಪಾರ್ (ರಾಯಚೂರು), ಹರೀಶ್ ನಾರಾಯಣ್ ಗಾಂಧಿ(ಚಾಮರಾಜಪೇಟೆ), ದುರ್ಗೇಶ್ ಮೇಗಲಮನಿ(ಹಾವೇರಿ), ಪ್ರವೀಣ್ ಕುಮಾರ್(ಚಾಮುಂಡೇಶ್ವರಿ), ಸೈಫುಲ್ಲ (ವಿಜಯನಗರ), ಮಲ್ಲಿಕಾರ್ಜುನ ಚೌಹಾಣ್(ಬಾದಾಮಿ), ರಾಘವೇಂದ್ರ (ಸಿ.ವಿ.ರಾಮನ್ ನಗರ), ಶರಣಪ್ಪ ಭೀಮಶಾ ಝಳಕಿ(ಆಳಂದ) ಸೇರಿದಂತೆ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳಿದ್ದು, ಶೀಘ್ರದಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ವಿವರಿಸಿದರು.