ರಾಜೇಂದ್ರ ಅರಮನೆ

Update: 2018-04-09 15:41 GMT

ಮೂಡುಬಿದಿರೆ, ಎ.9 : ಇಲ್ಲಿನ ಚೌಟರ ಅರಮನೆಯ ಹಿರಿಯರಾದ ರಾಜೇಂದ್ರ ಅರಮನೆ (81) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಅವರು ಪತ್ನಿ, ಪುತ್ರ, ಪುತ್ರಿ ಯನ್ನು ಅಗಲಿದ್ದಾರೆ.

ಮೂಡುಬಿದಿರೆಯ ಧಾರ್ಮಿಕ, ಶೈಕ್ಷಣಿಕ ಸಹಿತ ಸಮಗ್ರ ಬೆಳವಣಿಗೆಗೆ ಅವರು ಅಪಾರ ಕೊಡುಗೆ ನೀಡಿದ್ದರು. ಮೂಡುಬಿದಿರೆಯ ಹಿರಿಯ ಶಿಕ್ಷಣ ಸಂಸ್ಥೆಗಳ ಲ್ಲೊಂದಾದ ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಜೈನ ಪದವಿ ಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಕಟ್ಟಡ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ವವ ಸಮಿತಿಯ ಉಪಾಧ್ಯಕ್ಷರಾಗಿದ್ದರು. ಪದ್ಮಾವತಿ ಕಲಾ ಮಂದಿರ ನಿರ್ಮಾಣಕ್ಕೂ ಪ್ರೇರಣೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ