ಹೋಮಿಯೋಪಥಿ ಚಿಕಿತ್ಸೆ ಕಡೆಗೆ ಹೆಚ್ಚಿದ ಒಲವು: ಡಾ.ಸಿ.ಬಿ.ನಂಜರಾಜು

Update: 2018-04-10 15:44 GMT

ಬೆಂಗಳೂರು, ಎ.10: ವೈದ್ಯಕೀಯ ಕ್ಷೇತ್ರ ಸಾಕಷ್ಟು ಪ್ರಮಾಣದಲ್ಲಿ ಬದಲಾವಣೆ ಕಂಡಿದ್ದು, ಇತ್ತೀಚಿನ ದಿನಗಳಲ್ಲಿ ಹೋಮಿಯೋಪಥಿ ಚಿಕಿತ್ಸೆ ಕಡೆಗೆ ಹೆಚ್ಚಿನ ಜನರು ಒಲವು ತೋರುತ್ತಿದ್ದಾರೆಂದು ಆಯುಷ್ ಇಲಾಖೆಯ ಜಂಟಿ ನಿರ್ದೇಶಕ ಡಾ.ಸಿ.ಬಿ.ನಂಜರಾಜು ಹೇಳಿದ್ದಾರೆ.

ವಿಶ್ವ ಹೋಮಿಯೋಪಥಿ ದಿನಾಚರಣೆ ಹಾಗೂ ಹೋಮಿಯೋಪಥಿ ಜನಕ ಡಾ. ಕಿಶ್ಚಿಯನ್ ಫೆಡ್ರಿಚ್ ಸಾಮ್ಯುಯಲ್ ಹಾನಿಮನ್ಸ್ ಅವರ 263ನೇ ಹುಟ್ಟುಹಬ್ಬ ಅಂಗವಾಗಿ ನಗರದ ಗಾಂಧಿ ಭವನದಲ್ಲಿ ಭಾರತೀಯ ಹೋಮಿಯೋಪಥಿ ವೈದ್ಯ ಸಂಘದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಳೆದ15-20 ವರ್ಷಗಳ ಹಿಂದೆ ರಾಜ್ಯದಲ್ಲಿ ಕೇವಲ 8-10 ಸರಕಾರಿ ಹೋಮಿಯೋಪಥಿ ಕ್ಲಿನಿಕ್‌ಗಳಿದ್ದವು. ಆದರೆ, ಇಂದು 180ಕ್ಕೂ ಹೆಚ್ಚು ಕ್ಲಿನಿಕ್‌ಗಳಿವೆ. ಪ್ರಪಂಚದಲ್ಲಿ ಅಲೋಪತಿ ಹೊರತುಪಡಿಸಿ ಪರ್ಯಾಯ ವೈದ್ಯ ಚಿಕಿತ್ಸೆಯಲ್ಲಿ ಹೋಮಿಯೋಪಥಿ ಮೊದಲ ಸ್ಥಾನದಲ್ಲಿದೆ. ಇದರ ಪ್ರಯೋಜನವನ್ನು ಜನರಿಗೆ ವ್ಯವಸ್ಥಿತವಾದ ರೀತಿಯಲ್ಲಿ ತಲುಪಿಸಬೇಕಿದೆ. ಹಾಗಾದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ಲಿನಿಕ್‌ಗಳು ಆರಂಭವಾಗಲಿದೆ ಎಂದರು.

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (ಎನ್‌ಆರ್‌ಎಚ್‌ಎಂ) ಯೋಜನೆಯಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೋಮಿಯೋಪಥಿ ಚಿಕಿತ್ಸಾ ಕೇಂದ್ರಗಳು ನಿರ್ಮಾಣವಾಗಬೇಕು ಎಂದ ಅವರು, ಮಾನವ ಕುಲಕ್ಕೆ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯನ್ನು ಕೊಡುಗೆಯಾಗಿ ನೀಡಿದ ಹೋಮಿಯೋಪಥಿ ಜನಕ ಸಾಮ್ಯುಯಲ್ ಹಾನಿಮನ್ಸ್ ಅವರ ಕೊಡಿಗೆಯನ್ನು ಶ್ಲಾಸಿದರು.

ಕಾರ್ಯಕ್ರಮದಲ್ಲಿ ಹೋಮಿಯೋಪಥಿ ವೈದ್ಯ ಪದ್ಧತಿಯ ರಾಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಡಾ. ವೀರಬ್ರಹ್ಮಚಾರಿ, ಹೋಮಿಯೋಪಥಿ ತಜ್ಞರಾದ ಡಾ. ಎ.ಬಿ. ಜಯಂತ್, ಡಾ.ಎ.ರಾಜೇಶ್, ಡಾ.ವಿಜಯ್ ಕುಮಾರ್, ಸಂಘದ ಅಧ್ಯಕ್ಷ ಡಾ. ಕೆ.ಪಿ. ನಿರಂಜನ್, ಪ್ರಧಾನ ಕಾರ್ಯದರ್ಶಿ ಡಾ. ಆರ್. ಶಿವಕಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News