×
Ad

ಉಮರ್ ಗಂಡಿ

Update: 2018-04-11 23:14 IST

ವಿಟ್ಲ, ಎ. 11: ಇಲ್ಲಿನ ಹಿರಿಯ ಗುತ್ತಿಗೆದಾರರಾದ ವೀರಕಂಭ ಗ್ರಾಮದ ಕೋಡಪದವು ನಿವಾಸಿ ಉಮರ್ ಗಂಡಿ (54) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.

ಅವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಅರಣ್ಯ ಸಚಿವ ಬಿ.ರಮಾನಾಥ ರೈ, ಆಹಾರ ಸಚಿವ ಯು.ಟಿ.ಖಾದರ್, ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಎನ್ನೆಸ್ ಕರೀಮ್, ತಾ.ಪಂ. ಮಾಜಿ ಸದಸ್ಯ ಮಾಧವ ಮಾವೆ ಮೊದಲಾದವರು ಮೃತರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News