×
Ad

ಬೆಂಗಳೂರು: ನಾಪತ್ತೆಯಾಗಿದ್ದ ವೈದ್ಯೆ ಪತ್ತೆ

Update: 2018-04-11 23:57 IST

ಬೆಂಗಳೂರು, ಎ.11: ವೈದ್ಯೆಯೊಬ್ಬರು ದಿಢೀರ್ ನಾಪತ್ತೆಯಾಗಿದ್ದ ಪ್ರಕರಣ ಸಂಬಂಧ ಆಕೆಯನ್ನು ಪತ್ತೆ ಮಾಡಲಾಗಿದೆ ಎಂದು ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದರು.

ಕೆನಡಾದಲ್ಲಿ ಅಧ್ಯಯನ ಮಾಡುತ್ತಿದ್ದ ಡಾ.ಆತ್ರೇಯಿ ಮಜುಂದಾರ್(35), ದಿಢೀರ್ ನಗರದ ಬೆಳ್ಳಂದೂರಿನ ಖಾಸಗಿ ಹೊಟೇಲ್‌ನಿಂದ ಎ.6ರಂದು ನಾಪತ್ತೆಯಾಗಿದ್ದರು. ಸ್ಕಿಜೋಫ್ರೇನಿಯ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಈಕೆ ನಾಪತ್ತೆಯಾಗಿರುವ ಬಗ್ಗೆ ಮಾರತಹಳ್ಳಿ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದರು.

ಪ್ರಕರಣ ಸಂಬಂಧ ತನಿಖೆ ನಡೆಸಿದ ವೈಟ್‌ಫೀಲ್ಡ್ ವಿಭಾಗದ ಪೊಲೀಸರು, ಮಂಗಳವಾರ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಹೊಟೇಲ್‌ನಲ್ಲಿ ಪತ್ತೆಹಚ್ಚಿ, ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದರು.

ವೈದ್ಯೆಗೆ ಮಾನಸಿಕ ಕಾಯಿಲೆ ಇದ್ದು, ಏಕಾಏಕಿ ಮನೆ ಬಿಟ್ಟು ಹೋಗಿದ್ದಾರೆ. ಪ್ರತಿ ದಿನ ಹೊಟೇಲ್ ಬದಲಾವಣೆ ಮಾಡುತ್ತಿದ್ದಳು. ಆದರೆ, ನಿನ್ನೆ ಆಕೆಯನ್ನು ಪೊಲೀಸರು ಸಿಬ್ಬಂದಿ ಪತ್ತೆಹಚ್ಚಿ ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News