ಸಿ.ಸಿ. ಕ್ಯಾಮರಾ ಅಳವಡಿಸಿ

Update: 2018-04-11 18:42 GMT

ಮಾನ್ಯರೇ,

ಕರ್ನಾಟಕ ಸರಕಾರದ ಪೊಲೀಸ್ ಇಲಾಖೆಯ ವತಿಯಿಂದ ನಗರದಾದ್ಯಂತ 198 ವಾರ್ಡ್‌ಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲು ಕ್ರಮಕೈಗೊಂಡು ನಗರದ ಜನತೆಗೆ ರಕ್ಷಣೆಯನ್ನು ಒದಗಿಸಲು ಕ್ರಮ ಕೈಗೊಂಡಿರುವುದು ಪ್ರಶಂಸನೀಯ.
ಈ ಕಾರ್ಯಕ್ರಮದ ಅಂಗವಾಗಿ ಬಾಪೂಜಿನಗರ ವಾರ್ಡ್ 134 2ನೇ ಹಂತ 3, 3ಎ, 3ಬಿ ಹಾಗೂ 4ನೇ ಮುಖ್ಯರಸ್ತೆಗಳು ಕೂಡುವ ಸ್ಥಳಗಳಲ್ಲಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಗರ ಕೇಂದ್ರ ಗ್ರಂಥಾಲಯ ಬಾಪೂಜಿನಗರ ಶಾಖೆ, ಮುನೇಶ್ವರ ದೇವಸ್ಥಾನ, ವಿವೇಕಾನಂದ ಉದ್ಯಾನವನ, ಶ್ರೀಕೃಷ್ಣದೇವರಾಯ ರೈಲು ನಿಲುಗಡೆ, ರೈಲು ಕೆಳ ಸೇತುವೆ ಸುತ್ತ ಮುತ್ತ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲು ಕ್ರಮಕೈಗೊಳ್ಳುವುದಲ್ಲದೆ, ನಗರಾದ್ಯಂತ ಸರಕಾರಿ ಕಟ್ಟಡಗಳು, ಆಟದ ಮೈದಾನಗಳು, ಉದ್ಯಾನವನಗಳು, ಕೆರೆ ಬಯಲು, ಮೇಲು ಅಥವಾ ಕೆಳ ಸೇತುವೆಗಳು ಹಾಗೂ ರಸ್ತೆಗಳು ಕೂಡುವ ಸ್ಥಳಗಳಲ್ಲಿ ಕೂಡಾ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿ ನಾಗರಿಕರಿಗೆ ರಕ್ಷಣೆ, ಶಾಂತಿ ಮತ್ತು ನೆಮ್ಮದಿಯನ್ನು ಪೊಲೀಸ್ ಇಲಾಖೆ ಒದಗಿಸಲಿ.

Writer - -ಚಂದ್ರಶೇಖರ, ಬೆಂಗಳೂರು

contributor

Editor - -ಚಂದ್ರಶೇಖರ, ಬೆಂಗಳೂರು

contributor

Similar News