×
Ad

ಬೆಂಗಳೂರು: ಎ.13 ರಂದು ಮಾಧ್ಯಮ ಕಾರ್ಯಾಗಾರ

Update: 2018-04-12 21:00 IST

ಬೆಂಗಳೂರು, ಎ.12: ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಎ.13 ರಂದು ಬೆಳಗ್ಗೆ 10 ಗಂಟೆಗೆ ಚುನಾವಣಾ ವಿಷಯಗಳ ಚರ್ಚೆ ಮಾಧ್ಯಮ ಕಾರ್ಯಾಗಾರವನ್ನು ನಗರದ ಕ್ಯಾಪಿಟಲ್ ಹೊಟೇಲ್‌ನಲ್ಲಿ ಏರ್ಪಡಿಸಿದೆ

ಕಾರ್ಯಾಗಾರದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಮಾಧ್ಯಮ ಸಂಬಂಧಿ ವಿಷಯಕ್ಕೆ ಸಂಬಂದಪಟ್ಟಂತೆ ರಾಜಕೀಯ ಜಾಹೀರಾತುಗಳ ಪ್ರಮಾಣೀಕರಣ ಹಾಗೂ ಪಾವತಿ ಸುದ್ದಿ, ಚುನಾವಣಾ ಪ್ರಚಾರದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಕುರಿತು ಮಾಹಿತಿ ನೀಡಲಾಗುತ್ತದೆ.

ಮಾಧ್ಯಮದವರಿಗೆ ಚುನಾವಣಾ ಪ್ರಕ್ರಿಯೆ ವರದಿಗಾಗಿ ಒದಗಿಸುವ ಸೌಲಭ್ಯಗಳು, ಆಕಾಶವಾಣಿ, ದೂರದರ್ಶನಗಳಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಪ್ರಸಾರ ಅವಧಿ ನಿಗದಿಪಡಿಸುವುದು. ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆ ನಿಗಾವಹಿಸುವುದು. ಸೇರಿದಂತೆ ಮಾಧ್ಯಮಗಳು ಅನುಸರಿಸಬೇಕಾದ ಮಾರ್ಗಸೂಚಿಗಳು ಕುರಿತು ಚುನಾವಣಾ ಆಯೋಗದ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News