ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಫೈನಲ್‌ಗೆ

Update: 2018-04-13 18:32 GMT

ಗೋಲ್ಡ್‌ಕೋಸ್ಟ್, ಎ.13: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಅರ್ಹತಾ ಸುತ್ತಿನಲ್ಲಿ ತಾನೆಸೆದ ಮೊದಲ ಪ್ರಯತ್ನದಲ್ಲೇ 80.42 ಮೀ. ದೂರಕ್ಕೆ ಜಾವೆಲಿನ್ ಎಸೆದ ಚೋಪ್ರಾ ಫೈನಲ್‌ಗೆ ಅರ್ಹತೆ ಪಡೆದರು. ಅರ್ಹತಾ ಸುತ್ತಿನಲ್ಲಿ ಒಟ್ಟು 12 ಸ್ಪರ್ಧಿಗಳಿದ್ದರು. ಈ ಪೈಕಿ ಚೋಪ್ರಾ ನಾಲ್ಕನೇ ಸ್ಥಾನ ಪಡೆದರು.

ಭಾರತದ ವಿಪಿನ್ ಕಸಾನ ತನ್ನ ಮೊದಲ ಪ್ರಯತ್ನದಲ್ಲಿ 78.88 ಮೀ.ದೂರಕ್ಕೆ ಜಾವೆಲಿನ್ ಎಸೆದುಫೈನಲ್‌ಗೆ ಪ್ರವೇಶಿಸಿದ್ದಾರೆ.

‘‘ನನ್ನ ಪ್ರಯತ್ನ(80.42 ಮೀ.) ತುಂಬಾ ಸಂತೋಷ ತಂದಿದೆ. ಫೈನಲ್‌ಗೆ ಅರ್ಹತೆ ಪಡೆಯಲು ಜಾವೆಲಿನ್‌ನ್ನು 78 ಮೀ. ದೂರಕ್ಕೆ ಎಸೆಯುವ ಅಗತ್ಯವಿತ್ತು. ನಾನು ಜರ್ಮನಿಯ ಕೋಚ್‌ರೊಂದಿಗೆ ಕಳೆದ 25 ದಿನಗಳಿಂದ ಅಭ್ಯಾಸ ನಡೆಸುತ್ತಿದ್ದೇನೆ’’ ಎಂದು 20ರ ಹರೆಯದ ಚೋಪ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News